Saturday, 23rd November 2024

ದೇಶಾದ್ಯಂತ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ ಜಾರಿ

ನವದೆಹಲಿ: ಕೇಂದ್ರ ಸರ್ಕಾರವು ಪ್ರಾರಂಭಿಸಿದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯನ್ನ ದೇಶಾದ್ಯಂತ ಜಾರಿಗೆ ತರಲಾಗಿದೆ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಸ್ಕೀಮ್ ಪಡಿತರ ಚೀಟಿಗಳ ಪೋರ್ಟಬಿಲಿಟಿ ಯೋಜನೆಯಾಗಿದ್ದು, ಇದರಲ್ಲಿ ಪಡಿತರ ಚೀಟಿ ಗಳನ್ನ ಎಲ್ಲಿ ಬೇಕಾದರೂ ಬಳಸ ಬಹುದು. ಇದಕ್ಕಾಗಿ ನಿಮ್ಮ ಪಡಿತರ ಚೀಟಿಯನ್ನ ಆಧಾರ್‌ಗೆ ಲಿಂಕ್ ಮಾಡಬೇಕು. ಆದ್ದರಿಂದ ಬಯೋಮೆಟ್ರಿಕ್ ದತ್ತಾಂಶದ ಆಧಾರದ ಮೇಲೆ ಪಡಿತರ ಸೌಲಭ್ಯವನ್ನ ಎಲ್ಲಿ ಬೇಕಾದರೂ ಪಡೆಯಬಹುದು.

ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯಡಿ, ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ಪ್ರಯೋಜನವನ್ನ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ತಮ್ಮ ಕೋಟಾದ ಸಬ್ಸಿಡಿ ಧಾನ್ಯವನ್ನ ದೇಶದ ಯಾವುದೇ ಪಾಯಿಂಟ್ ಆಫ್ ಸೇಲ್ ಯಂತ್ರಕ್ಕೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ತೆಗೆದುಕೊಳ್ಳಬಹುದು. ಪಡಿತರ ಚೀಟಿಯನ್ನ ಎಲ್ಲಿ ಬೇಕಾದರೂ ಬಳಸಬಹುದು. ಬಯೋಮೆಟ್ರಿಕ್ ಪರಿಶೀಲನೆಯ ಆಧಾರದ ಮೇಲೆ, ಸಬ್ಸಿಡಿ ಆಹಾರ ಧಾನ್ಯ ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನ ಜಾರಿಗೆ ತಂದ 36ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಸಾಂ ಪಾತ್ರವಾಗಿದೆ ಎಂದು ಆಹಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಒಎನ್‌ಒಆರ್‌ಸಿ ಯೋಜನೆಯನ್ನ ಆಗಸ್ಟ್ 2019ರಲ್ಲಿ ಪ್ರಾರಂಭಿಸಲಾಯಿತು.

ಒಎನ್‌ಒಆರ್‌ಸಿ ಯೋಜನೆಯ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಸರ್ಕಾರವು ‘ಮೇರಾ ರೇಷನ್’ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ ಫಲಾನುಭವಿಗಳಿಗೆ ಪಡಿತರದ ಬಗ್ಗೆ ನೈಜ ಸಮಯದ ಮಾಹಿತಿಯನ್ನ ನೀಡುತ್ತದೆ. ಈ ಅಪ್ಲಿಕೇಶನ್ 13 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಯವರೆಗೆ, ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್‌ನಲ್ಲಿ 20 ಮಿಲಿಯನ್ ಬಾರಿ ಡೌನ್ಲೋಡ್ ಮಾಡಲಾಗಿದೆ.