Sunday, 15th December 2024

ಜ.22 ರಂದು ಮುಸ್ಲಿಮರ ವಿರುದ್ಧ ಮೋದಿ ಆಪರೇಷನ್ ಬ್ಲೂಸ್ಟಾರ್: ಗುರ್ಪತ್ವಂತ್ ಸಿಂಗ್ ಪನ್ನುನ್

ವದೆಹಲಿ: ಅಯೋಧ್ಯೆಯಲ್ಲಿ ಜ.22 ರಂದು ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಮತ್ತು ಖಲಿಸ್ತಾನಿ ಗುರ್ಪತ್ವಂತ್ ಸಿಂಗ್ ಪನ್ನುನ್ ಮತ್ತೊಮ್ಮೆ ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.

ಬಾಬರಿ ಮಸೀದಿಯ ಮೇಲೆ ನಿರ್ಮಿಸಲಾಗಿರುವ ದೇವಾಲಯದ ಉದ್ಘಾಟನೆಯನ್ನು ವಿರೋಧಿಸುವಂತೆ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಪನ್ನುನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಮುಸ್ಲಿಮರ ಜಾಗತಿಕ ಶತ್ರು” ಎಂದು ಕರೆದಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಬಲವಂತವಾಗಿ ಮತಾಂತರಗೊಂಡ ಸಾವಿರಾರು ಮುಸ್ಲಿಮರ ದೇಹಗಳ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

“ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ನಡೆಯುವ ಪ್ರತಿಷ್ಠಾಪನಾ ಸಮಾರಂಭವು ಅತ್ಯಂತ ಅಪವಿತ್ರ, ದೈವಭಕ್ತಿರಹಿತ, ಅನೀತಿ ಯುತ ಸಮಾರಂಭವಾಗಿದೆ” ಎಂದು ಅವರು ಹೇಳಿದ್ದಾರೆ.

ಜ.22 ರಂದು ಮುಸ್ಲಿಮರ ವಿರುದ್ಧ ಮೋದಿ ಆಪರೇಷನ್ ಬ್ಲೂಸ್ಟಾರ್ ನಡೆಸಲಿದ್ದಾರೆ ಎಂದು ಹೇಳಿದ ಪನ್ನುನ್ ಅಮೃತಸರದಿಂದ ಅಯೋಧ್ಯೆಗೆ ಪ್ರತಿಭ ಟನೆ ನಡೆಸಲು ಮತ್ತು ರಾಮ ಮಂದಿರ ಕಾರ್ಯಕ್ರಮದ ಹಿನ್ನೆಲೆ ವಿಮಾನ ನಿಲ್ದಾಣಗಳನ್ನು ಬಂದ್ಗ ಮಾಡಲು ಸಹಾಯ ಮಾಡುವಂತೆ ಮುಸ್ಲಿಮರಿಗೆ ಕರೆ ನೀಡಿದ್ದಾರೆ.