ಕೊಲ್ಕತ್ತಾ: ಬಿಜೆಪಿಗೆ ಪರ್ಯಾಯವಾಗಿ ಮತ್ತೊಂದು ಶಕ್ತಿ ಕಂಡುಕೊಂಡ ದಿನ ಕೇಂದ್ರ ದಲ್ಲಿ ಅಧಿಕಾರ ಕಳೆದುಕೊಳ್ಳುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿಯನ್ನು ತೊಡೆದು ಹಾಕಲು 2024ರ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಬೇಕಾಗಿದೆ. ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ರೂಪಿಸಲು ವಿರೋಧ ಪಕ್ಷಗಳು ಒಗ್ಗೂಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ.
ಟಿಎಂಸಿ ಸಂಘಟನಾ ಸಭೆಯಲ್ಲಿ ಮಾತನಾಡಿದ ಮಮತಾ ಅವರು, ಪರ್ಯಾಯ ಮಾರ್ಗ ವಿಲ್ಲದ ಕಾರಣ ಬಿಜೆಪಿಯೇ ಇನ್ನೂ ಅಧಿಕಾರದಲ್ಲಿದೆ. ಮುಂದೊಂದು ದಿನ ಅದನ್ನು ಹೊರಹಾಕಲಾಗುತ್ತದೆ ಎಂದು ಬಹಿರಂಗವಾಗಿಯೇ ಸಮರ ಸಾರಿದರು.
‘ಬಿಜೆಪಿ ‘ದಂಗಬಾಜ್’ (ಗಲಭೆಕೋರ) ಮತ್ತು ಭ್ರಷ್ಟ ಪಕ್ಷವಾಗಿದೆ. ಅವರು ಪ್ರಜಾಪ್ರಭುತ್ವ ವನ್ನು ನಾಶಮಾಡಲು ಬಯಸುತ್ತಾರೆ. ಭಾರತೀಯ ಜನತಾ ಪಕ್ಷವನ್ನು ಗಲಭೆಕೋರರ ಪಕ್ಷ ಎಂದು ಹೇಳಿದರು.