Saturday, 14th December 2024

ಕಂಗನಾ ಹೇಳಿಕೆಗೆ ಕಿಡಿ ಕಾರಿದ ಅಸಾದುದ್ದೀನ್​ ಓವೈಸಿ

ಲಖನೌ: ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ ಎಂದ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್​ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ.

ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಇದೇ ಮಾತನ್ನು ಯಾರಾದರೂ ಮುಸ್ಲಿಮರು ಹೇಳಿ ದ್ದರೆ ಕಪಾಳ ಮೋಕ್ಷ ಮಾಡಲಾಗು ತ್ತಿತ್ತು. ಗುಂಡು ಹಾರಿಸಿ ಜೈಲಿಗಟ್ಟುತ್ತಿದ್ದರು ಎಂದು ಹೇಳಿದ್ದಾರೆ.

24 ಸೆಕೆಂಡ್​ಗಳ ವಿಡಿಯೋದಲ್ಲಿ ಕಂಗನಾ ರಣಾವತ್​, 1947ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಾವು ನಿಜವಾದ ಸ್ವಾತಂತ್ರ್ಯವನ್ನು 2014ರಲ್ಲಿ ಪಡೆದಿ ದ್ದೇವೆ ಎಂದು ಹೇಳಿದ್ದರು.

ಕಂಗನಾ ರಣಾವತ್​ರ ಈ ಮಾತಿಗೆ ಕಾಂಗ್ರೆಸ್ಸಿಗರಿಂದ ವ್ಯಾಪಕ ವಿರೋಧ ಕೇಳಿಬರು ತ್ತಿದ್ದಂತೆಯೇ ಇನ್​ಸ್ಟಾಗ್ರಾಂನಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗೆ ಸಮರ್ಥನೆ ನೀಡಿದ್ದರು. ಸಂದರ್ಶನದಲ್ಲಿ ನಾನು ಸ್ವಾತಂತ್ರ್ಯ ಹೋರಾಟಗಾರರಿಗೆ ಅಥವಾ ಹುತಾತ್ಮರಿಗೆ ಅಪಮಾನ ಮಾಡಿದ್ದೇ ಹೌದು ಎಂಬುದನ್ನು ಸಾಬೀತು ಪಡಿಸಿದಲ್ಲಿ ಪದ್ಮಶ್ರೀಯನ್ನು ವಾಪಸ್​ ನೀಡುವುದಾಗಿ ಹೇಳಿದ್ದರು.

ಇದೇ ಮಾತನ್ನು ಮುಸ್ಲಿಮರು ಹೇಳಿದ್ದರೆ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿತ್ತು. ಹೀಗಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಂಗನಾ ಹಾಗೂ ಕೇಂದ್ರ ಸರ್ಕಾರಕ್ಕೆ ಟಾಂಗ್​ ನೀಡಿದ್ದಾರೆ.