Friday, 22nd November 2024

ಕೇಜ್ರಿವಾಲ್ ‘ಛೋಟಾ ರೀಚಾರ್ಜ್‌’: ಓವೈಸಿ ಟೀಕೆ

ವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ‘ಛೋಟಾ ರೀಚಾರ್ಜ್‌’ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ.

ದೆಹಲಿ ಪಾಲಿಕೆ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ನಡೆಸಿದ ಪ್ರಚಾರ ಸಭೆ ಯಲ್ಲಿ ಮಾತ ನಾಡಿ, ‘ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಮುಸ್ಲಿಮರನ್ನು ನಿಂದಿಸಿದರು. ಪ್ರಧಾನಿ ಮೋದಿಯವರ ಎಲ್ಲಾ ದಾಖಲೆಗಳನ್ನು ಕೇಜ್ರಿವಾಲ್ ಮುರಿಯಲು ಹೊರಟಿ ದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ರಾಜಧಾನಿಯಲ್ಲಿ ಗಲಭೆ ನಡೆದಾಗ ಕೇಜ್ರಿವಾಲ್‌ ನಾಪತ್ತೆಯಾಗಿದ್ದರು. ಪೌರತ್ವ ತಿದ್ದು ಪಡಿ ಕಾಯ್ದೆ ವಿರೋಧಿಸಿ ಶಹೀನ್‌ಬಾಗ್‌ ನಲ್ಲಿ ‍‍‍ಪ್ರತಿಭಟನೆ ಮಾಡುತ್ತಿದ್ದವರ ವಿರುದ್ದ ಮಾತನಾಡಿದರು ಎಂದು ಓವೈಸಿ ಕಿಡಿಕಾರಿದ್ದಾರೆ.

‘ಕೇಜ್ರಿವಾಲ್‌ ಅವರು 2013ರ ನರೇಂದ್ರ ಮೋದಿ. ಪ್ರಧಾನಿಯವರ ದಾಖಲೆಗಳನ್ನೆಲ್ಲಾ ಕೇಜ್ರಿವಾಲ್ ಮುರಿಯಲು ಹೊರಟಿದ್ದಾರೆ’ ಎಂದು ಓವೈಸಿ ಹೇಳಿದ್ದಾರೆ.

ಎಐಎಂಐಎಂ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮುಸ್ಲಿಂ ಸಮುದಾಯ ತಮ್ಮದೇ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟಿದ್ದಾರೆ.