Sunday, 8th September 2024

ಕೇಂದ್ರ ಸರ್ಕಾರಕ್ಕೆ ಅಸಾದುದ್ದೀನ್ ಒವೈಸಿ ತಿರುಗೇಟು

#AsaduddinOwaisi

ನವದೆಹಲಿ: ಒಂದು ವೇಳೆ 18 ವರ್ಷದ ಯುವತಿ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದಾದ ಮೇಲೆ, ಆಕೆ ತನ್ನ ಸಂಗಾತಿಯನ್ನು ಯಾಕೆ ಆಯ್ಕೆ ಮಾಡಿಕೊಳ್ಳಲು ತಕರಾರು ಯಾಕೆ? ಎಂದು ಎಐಎಂಎಂ ಸಂಸದ ಅಸಾದುದ್ದೀನ್ ಒವೈಸಿ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರಂಕುಶ ಆಡಳಿತಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಭಾರತದ ಪ್ರಜೆಯೊಬ್ಬ 18 ವಯಸ್ಸಿಗೆ ಕರಾರು ಪತ್ರಕ್ಕೆ, ಉದ್ಯಮ ಆರಂಭಿಸಲು ಸಹಿ ಹಾಕಬಹುದು, ಪ್ರಧಾನಿ, ಸಂಸದ, ಶಾಸಕರನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ಯುವಕರ ವಿವಾಹ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಕೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.

ಭಾರತದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಇಳಿಕೆಯಾಗಿರುವುದು ಕೇವಲ ಕ್ರಿಮಿನಲ್ ಕಾಯ್ದೆಯಿಂದ ಮಾತ್ರವಲ್ಲ, ಇದಕ್ಕೆ ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಯ ಕೊಡುಗೆಯೂ ಇದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರದ ಗಣತಿಯ ಪ್ರಕಾರ ಸುಮಾರು 12 ಮಿಲಿಯನ್ ಬಾಲ್ಯವಿವಾಹ ನಡೆದಿರುವುದಾಗಿ ತಿಳಿಸಿದೆ.

ಡಾಟಾ ಹಂಚಿಕೊಳ್ಳುವ ಹಕ್ಕು ನಿಮಗಿದೆ, ಹಾಗಾದರೆ ಬಾಳಸಂಗಾತಿಯನ್ನು ಯಾಕೆ ಆಯ್ಕೆ ಮಾಡಿಕೊಳ್ಳ ಬಾರದು. ಇದೊಂದು ತಪ್ಪು ಹೆಜ್ಜೆ ಎಂಬುದು ನನ್ನ ನಿಲುವಾಗಿದೆ. ಖಾಸಗಿತನ ಮೂಲಭೂತ ಹಕ್ಕು ಎಂಬು ದಾಗಿ ಸುಪ್ರೀಂಕೋರ್ಟ್ ಕೂಡ ಹೇಳಿದೆ ಎಂದು ಒವೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!