Friday, 20th September 2024

ಜಮ್ಮು-ಕಾಶ್ಮೀರದ ಪೀಪಲ್ಸ್ ಆಂಟಿ ಪ್ಯಾಸಿಸ್ಟ್ ಫ್ರಂಟ್’ಗೆ ನಿಷೇಧ ಹೇರಿಕೆ

ವದೆಹಲಿ: ದೇಶದ ಭದ್ರತೆ ಸವಾಲುಡ್ಡುವ ಘಟನೆಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಲಷ್ಕರ್-ಇ- ತೋಯ್ಬಾದ ಅಂಗ ಸಂಸ್ಥೆ ಜಮ್ಮು-ಕಾಶ್ಮೀರದ ಪಿಪಲ್ಸ್ ಆಂಟಿ ಪ್ಯಾಸಿಸ್ಟ್ ಫ್ರಂಟ್ (ಪಿಎಎಫ್‍ಎಫ್) ಸಂಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ.

ಲಷ್ಕರ್-ಇ-ತೋಯ್ಬಾದ ಸದಸ್ಯ ಅರ್ಬಜ್ ಅಹಮದ್ ಮಿರ್‍ನನ್ನು ಪ್ರತ್ಯೇಕ ಭಯೋತ್ಪಾದಕ ಎಂದು ಇದೇ ವೇಳೆ ಘೋಷಿಸ ಲಾಗಿದೆ. ಪಿಎಎಫ್‍ಎಫ್ ಭದ್ರತಾ ಸಿಬ್ಬಂದಿಗಳಗೆ ಬೆದರಿಕೆ ಒಡ್ಡುವುದು, ರಾಜಕೀಯ ನಾಯಕರಿಗೆ ಮತ್ತು ನಾಗರೀಕ ಕೆಲಸಗಾರರಿಗೆ ಬೆದರಿಕೆ ಹಾಕುತ್ತಿದ್ದರು.

ಜಮ್ಮು-ಕಾಶ್ಮೀರ ಮತ್ತು ದೇಶದ ಇತರ ನಗರಗಳಲ್ಲಿ ಪಿಎಎಫ್‍ಎಫ್ ಸಂಘಟನೆ ಹಿಂಸಾಕೃತ್ಯ ನಡೆಸಲು ಸಂಚು ರೂಪಿಸಿತ್ತು. ಬಂದೂಕು, ಶಸ್ತ್ರಾಸ್ತ್ರ, ಸ್ಪೋಟಕಗಳ ಬಳಕೆಗೆ ತರಬೇತಿ ನೀಡಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967ರ (ಯುಎಪಿಎ) ಸೆಕ್ಷನ್ 35ರ ಉಪ ಪರಿಚ್ಛೇಧ 1ರ ಪ್ರಕಾರ ಪ್ರದತ್ತ ವಾದ ಅಧಿಕಾರ ಚಲಾಯಿಸಿ ಪಿಎಎಫ್‍ಎಫ್ ಸಂಘಟನೆಯನ್ನು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಪ್ರತ್ಯೇಕವಾದ ಅಧಿಸೂಚನೆಯಲ್ಲಿ ಅರ್ಬಾಜ್ ಅಹಮದ್ ಮೀರ್‍ನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದೆ.