Saturday, 14th December 2024

‘ಪೇಯ್ಡ್ ಚಾಲೆಂಜ್’ ಸ್ವೀಕರಿಸಿ ವ್ಯಕ್ತಿ ಸಾವು..!

ಪಾಟ್ನಾ: ಒಂದೇ ಬಾರಿಗೆ ಕನಿಷ್ಠ 150 ಮೊಮೊಗಳನ್ನು ತಿನ್ನುವ ‘ಪೇಯ್ಡ್ ಚಾಲೆಂಜ್’ ಸ್ವೀಕರಿಸಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಮೃತನನ್ನು ಜಿಲ್ಲೆಯ ತಾವೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹೋರ್ವಾ ಗ್ರಾಮದ ವಿಪಿನ್ ಕುಮಾರ್ ಮಾಂಝಿ (25) ಎಂದು ಗುರುತಿಸಲಾಗಿದೆ.

ಮಾಂಝಿ ಮೊಬೈಲ್ ಫೋನ್ಗಳ ಮೆಕ್ಯಾನಿಕ್ ಆಗಿದ್ದು, ಜಿಲ್ಲೆಯ ಗ್ಯಾನಿ ಮೋರ್ನಲ್ಲಿ ಅಂಗಡಿ ಹೊಂದಿದ್ದರು. ಗ್ಯಾನಿ ಮೋರ್ ಬಳಿ ಅವರ ಮೃತ ದೇಹ ಪತ್ತೆಯಾಗಿದೆ.

“ಕನಿಷ್ಠ 150B ಮೊಮೊಗಳನ್ನು ತಿನ್ನುವ ಸವಾಲಿನಲ್ಲಿ ಮಾಂಝಿ ಭಾಗಿಯಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೆಚ್ಚಿನ ಸಂಖ್ಯೆಯ ಮೊಮೊ ಗಳನ್ನು ಸೇವಿಸಿದ ನಂತರ, ಅಂಗಡಿಯಲ್ಲಿ ಅವರ ಆರೋಗ್ಯವು ಹದಗೆಟ್ಟಿತು.

ಅಂಗಡಿ ಮಾಲೀಕರು ಮತ್ತು ಅವರ ಇಬ್ಬರು ಸ್ನೇಹಿತರು ಘಟನೆಯ ಬಗ್ಗೆ ನಮಗೆ ಮಾಹಿತಿ ನೀಡಿದರು. ನಾವು ತಕ್ಷಣ ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಿದ್ದೇವೆ, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಥಾವೆ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಶಿ ರಂಜನ್ ಹೇಳಿದ್ದಾರೆ.

ಮೃತನ ಕುಟುಂಬ ಸದಸ್ಯರು ಅವನ ಸ್ನೇಹಿತರು ವಿಷ ಬೆರೆಸಿದ ಆಹಾರವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.