Sunday, 15th December 2024

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ: ಪಾಕಿಸ್ತಾನ ಸಹೋದರಿಯ ಹಾರೈಕೆ

ನವದೆಹಲಿ : ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಖ್, ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿ ಸಿದ್ದು, 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ.

ಈ ಬಾರಿ ಪಿಎಂ ಮೋದಿ ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸುತ್ತೇನೆ.

 ನಾನೇ ಈ ರಾಖಿಯನ್ನ ರೇಷ್ಮೆ ರಿಬ್ಬನ್‌ನಿಂದ ಕಸೂತಿ ವಿನ್ಯಾಸದೊಂದಿಗೆ ತಯಾರಿಸಿದ್ದೇನೆ. ಅವರ ದೀರ್ಘ ಮತ್ತು ಆರೋಗ್ಯ ಕರ ಜೀವನಕ್ಕಾಗಿ ನಾನು ಪತ್ರ ಬರೆದು ಪ್ರಾರ್ಥಿಸಿ ದ್ದೇನೆ. ಇನ್ನು ನೀವು ಈಗ ಮಾಡುತ್ತಿರುವಂತೆ ಉತ್ತಮ ಕೆಲಸವನ್ನ ಮುಂದುವರಿಸಿ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಅವ್ರು ಅದಕ್ಕೆ ಅರ್ಹರು. ಯಾಕಂದ್ರೆ, ಅವರು ಅಂತಹ ಸಾಮರ್ಥ್ಯಗಳನ್ನ ಹೊಂದಿದ್ದು, ಪ್ರತಿ ಬಾರಿಯೂ ಭಾರತದ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ.