ಹೈದರಾಬಾದ್: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ವಿವಾದದ ಬೆನ್ನಲ್ಲೇ ದಕ್ಷಿಣ ಭಾರತದ ಮತ್ತೊಂದು ಪ್ರಸಿದ್ಧ ದೇಗುಲದ ಪ್ರಸಾದ(Palani temple prasadm)ದ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ತಮಿಳುನಾಡಿನ ಸುಪ್ರಸಿದ್ಧ ಪಳನಿ ದೇವಸ್ಥಾನದ ಪ್ರಸಾದಲ್ಲೂ ಕಲಬೆರಕೆ ಇದೆ ಎನ್ನುವ ವಿವಾದ ಹುಟ್ಟಿಕೊಂಡಿದೆ. ಆದರೆ ಇದರಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆಗಿದೆ ಎಂಬ ಆರೋಪ ಕೇಳಿಬಂದಿಲ್ಲ ಬದಲಾಗಿ ನಪುಂಸಕತೆ ಸೃಷ್ಟಿಸುವ ಡ್ರಗ್ಸ್ ಬೆರೆಸಲಾಗುತ್ತಿದೆ ಎಂಬ ವಿವಾದದ ಕಿಡಿ ಹೊತ್ತಿಕೊಂಡಿದೆ.
ಖ್ಯಾತ ತಮಿಳು ನಿರ್ದೇಶಕ(Tamil director) ಮೋಹನ್ ಜಿ. ಈ ಆರೋಪ ಮಾಡಿದ್ದಾರೆ. ಪಳನಿ ದೇವಸ್ಥಾನದಲ್ಲಿ ವಿತರಣೆಯಾಗುವ ಪ್ರಸಾದದಲ್ಲಿ ಪುರುಷರಲ್ಲಿ ನಪುಂಸಕತೆಯನ್ನು ಸೃಷ್ಟಿಸುವ ಮದ್ದನ್ನು ಬೆರೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನವೊಂದಲ್ಲಿ ಮೋಹನ್, ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆಯಾಗಿರುವ ಪ್ರಕರಣದ ಬಗ್ಗೆ ಮಾತನಾಡುತ್ತಾ, ಪಳನಿಯಲ್ಲೂ ಇಂತಹ ಅಕ್ರಮ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಪುರುಷರಲ್ಲಿ ಶಕ್ತಿಹೀನತೆಗೆ ಕಾರಣವಾಗುವ ಔಷಧಿಯನ್ನು ಪಂಚಮೃತಂನಲ್ಲಿ ಬೆರೆಸಿದ್ದಾರೆಂದು ಕೇಳಿದ್ದೆ. ಆ ಸುದ್ದಿ ಎಲ್ಲೆಡೆ ಹಬ್ಬುವ ಮುನ್ನವೇ ಅದನ್ನು ಮರೆಮಾಚಿ ಪಂಚಾಮೃತವನ್ನು ನಾಶಪಡಿಸಲಾಯಿತು. ಪುರಾವೆಯಿಲ್ಲದೆ ನಾವು ಮಾತನಾಡಬಾರದು, ಆದರೆ ಸರಿಯಾದ ವಿವರಣೆಯನ್ನು ನೀಡಲಿಲ್ಲ. ಅಲ್ಲಿ ಕೆಲಸ ಮಾಡುವವರು ಗರ್ಭನಿರೋಧಕ ಮಾತ್ರೆಗಳನ್ನು ಪಂಚಾಮೃತಗಳಲ್ಲಿ ಬೆರೆಸುತ್ತಿರುವ ಬಗ್ಗೆ ನನಗೆ ಹೇಳಿದ್ದಾರೆ. ಇದೆಲ್ಲಾ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯಾಗಿದೆ ಎಂದು ಮೋಹನ್ ಜಿ ಹೇಳಿದ್ದರು.
Director #MohanG has been arrested by TN Police !!
— Vijay_Karthikeyan (@VijayKarthik27) September 24, 2024
Reason 👇🏽pic.twitter.com/9uaoBbV9uG
ನಿರ್ದೇಶಕ ಮೋಹನ್ ಅರೆಸ್ಟ್
ಇನ್ನು ಈ ವಿಡಿಯೋ ಎಲ್ಲೆಡೆ ವೈರಲ್ ಅಗುತ್ತಿದ್ದಂತೆ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಯಾಗಿತ್ತು. ದ್ರೌಪತಿ, ರುದ್ರತಾಂಡವಂ ಮತ್ತು ಬಗಾಸುರನ್ ಚಿತ್ರಗಳ ಖ್ಯಾತಿಯ ಮೋಹನ್ ಜಿ ಅವರನ್ನು ತಿರುಚ್ಚಿ ಪೊಲೀಸ್ ಸೈಬರ್ ಕ್ರೈಂ ಘಟಕ ಮಂಗಳವಾರ ಬಂಧಿಸಿದೆ. ಪಳನಿ ದೇವಸ್ಥಾನದ ಪಂಚಾಮೃತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಸಚಿವ ಸೇಕರ್ ಬಾಬು ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ, ಮೋಹನ್ ಜಿ ಬಂಧನವನ್ನು ಖಂಡಿಸಿದ ಬಿಜೆಪಿ ನಾಯಕ ಅಶ್ವಥಾಮನ್, ಇದು ಅಸಂವಿಧಾನಿಕ ಎಂದು ಹೇಳಿದ್ದಾರೆ. ಕಾರಣ ಏನು ಮತ್ತು ಪ್ರಕರಣ ಏನು ಎಂಬ ಬಗ್ಗೆ ಕುಟುಂಬಕ್ಕೆ ಯಾವುದೇ ಔಪಚಾರಿಕ ಮಾಹಿತಿ ನೀಡಲಾಗಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ” ಎಂದು ಅಶ್ವಥಾಮನ್ ಅಲ್ಲಿಮುತ್ತು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Tirupati Laddu Row: ವಿವಾದ ನಡುವೆಯೇ ಬರೋಬ್ಬರಿ 14 ಲಕ್ಷ ತಿರುಪತಿ ಲಡ್ಡು ಮಾರಾಟ