ಪ್ರತಿಸ್ಪರ್ಧಿ ಓ ಪನ್ನೀರಸೆಲ್ವಂ ಅವರೊಂದಿಗೆ ನಾಯಕತ್ವದ ಸಂಘರ್ಷದಲ್ಲಿ ತೊಡಗಿದ್ದ ಪಳನಿ ಸ್ವಾಮಿ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಏರಿಸುವ ಹಾದಿಯನ್ನು ಸುಪ್ರೀಂ ಕೋರ್ಟ್ ತೀರ್ಪು ಸುಗಮಗೊಳಿಸಿತ್ತು.
ಮಾ.23 ರಂದು ಚುನಾವಣೆ ನಡೆಯಲಿದ್ದು, ಇಂದು ಮತ್ತು ನಾಳೆ ನಾಮಪತ್ರ ಸಲ್ಲಿಸಬಹುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಸೇಲಂನ ಪ್ರಬಲ ನಾಯಕ ಪಳನಿಸ್ವಾಮಿ ಬೆನ್ನಿಗೆ ಇಡೀ ಪಕ್ಷವೇ ನಿಂತಿರುವುದರಿಂದ ಯಾವುದೇ ಪೈಪೋಟಿ ಇರುವುದಿಲ್ಲ. ಮಾರ್ಚ್ 27 ರಂದು ಮತ ಎಣಿಕೆ ನಡೆಯಲಿದೆ.