Sunday, 15th December 2024

ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಪಾಪಾಲ್ಪ್ರೀತ್ ಸಿಂಗ್ ಬಂಧನ

ಚಂಡೀಗಢ: ತೀವ್ರಗಾಮಿ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಪಾಪಾಲ್ಪ್ರೀತ್ ಸಿಂಗ್ ಎಂಬಾತನನ್ನು ಹೋಶಿಯಾರ್ಪುರ ದಲ್ಲಿ ಬಂಧಿಸಲಾಗಿದೆ.
ಪಂಜಾಬ್ ಪೊಲೀಸರು ಮತ್ತು ಕೌಂಟರ್ ಇಂಟೆಲಿಜೆನ್ಸ್ ವಿಭಾಗವೂ ಕಾರ್ಯಾಚರಣೆ ನಡೆಸಿ ಪಾಪಾಲ್ಪ್ರೀತ್ ನನ್ನು ಬಂಧಿಸಿ ದ್ದಾರೆ. ಪಾಪಾಲ್ಪ್ರೀತ್ ಅಮೃತಪಾಲ್‌ನ ಮಾರ್ಗ ದರ್ಶಕ ಎಂದು ಪರಿಗಣಿಸಲಾಗಿದ್ದು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ದಲ್ಲಿ ಎಂದು ವರದಿಯಾಗಿದೆ.
ಪಂಜಾಬ್ ಪೊಲೀಸರು ಖಲಿಸ್ತಾನ್ ಬೆಂಬಲಿಗರು ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮೃತಪಾಲ್ ಮತ್ತು ಪಾಪಾಲ್ಪ್ರೀತ್ ಮಾರ್ಚ್ 18ರಿಂದ ತಲೆಮರೆಸಿಕೊಂಡಿದ್ದರು.

ತೀವ್ರಗಾಮಿ ಅಮೃತಪಾಲ್ ಸಿಂಗ್ ಮಾರ್ಚ್ 18ರಂದು ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಹಲವಾರು ವಾಹನಗಳನ್ನು ಬದಲಾಯಿಸಿ ಪರಾರಿಯಾ ಗಿದ್ದನು.

ಇಬ್ಬರೂ ಒಟ್ಟಿಗೆ ಹೋಶಿಯಾರ್ಪುರದಲ್ಲಿ ಕಾಣಿಸಿಕೊಂಡಿದ್ದರು ತೀವ್ರಗಾಮಿ ಸಂಘಟನೆ ಯಾದ ವಾರಿಸ್ ಪಂಜಾಬ್ ಡಿ ಮತ್ತು ಅದರ ಬೆಂಬಲಿಗರಾದ ಅಮೃತಪಾಲ್ ಮತ್ತು ಪಾಪಲ್ಪ್ರೀತ್ ತಲೆಮರೆಸಿಕೊಂಡಿದ್ದರು.

ಅಂದಿನಿಂದ ಪೊಲೀಸರು ಹೋಶಿಯಾರ್ಪುರ ಜಿಲ್ಲೆಯ ಗ್ರಾಮಗಳನ್ನು ಸುತ್ತುವರೆದಿದ್ದು ಮನೆ ಮನೆಗೆ ಹುಡುಕಾಟ ನಡೆಸಿದ್ದರು.