ಕೋಲ್ಕತ್ತ: ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ (54) ಕೋವಿಡ್ ವಿರುದ್ಧದ ಎರಡು ತಿಂಗಳ ಹೋರಾಟದ ಬಳಿಕ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಸುಭಂಕರ್ ಬ್ಯಾನರ್ಜಿ ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿಯರಿದ್ದಾರೆ. ಸುಭಂಕರ್ ಅವರ ಪಾರ್ಥಿವ ಶರೀರವನ್ನು ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಇರಿಸಲಾಗಿದ್ದು, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ. ಬ್ಯಾನರ್ಜಿ ಅವರನ್ನು ಜೂನ್ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಕಾಲ ಅವರಿಗೆ ಆಮ್ಲಜನಕದ ನೆರವು ನೀಡಲಾಗಿತ್ತು.
ನನಗೆ ಅವರು ಬಹಳ ನೆನಪಾಗುತ್ತಿದ್ದಾರೆ. ತಬಲಾ ಪ್ರಪಂಚ ಮತ್ತು ಭಾರತೀಯ ಸಂಗೀತ ಕ್ಷೇತ್ರ ಅವರನ್ನು ನೆನಪಿಸಿಕೊಳ್ಳಲಿದೆ’ ಎಂದು ತಬಲಾ ಕಲಾವಿದ ಜಾಕೀರ್ ಹುಸೇನ್ ಟ್ವೀಟ್ ಮಾಡಿದ್ದಾರೆ. ಸರ್ಕಾರವು ಬ್ಯಾನರ್ಜಿ ಅವರಿಗೆ ಸಂಗೀತ್ ಸಮ್ಮಾನ್ ಮತ್ತು ಸಂಗೀತ್ ಮಹಾನ್ ಸಮ್ಮಾನ್ ನೀಡಿ ಗೌರವಿಸಿದೆ.