Thursday, 12th December 2024

ಎಟಿಎಸ್‌ಗೆ ಪಾನ್ಸರೆ ಹತ್ಯೆ ಪ್ರಕರಣ ತನಿಖೆ ವರ್ಗಾವಣೆ

ಮುಂಬೈ: ಹೋರಾಟಗಾರ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸಿಐಡಿಯಿಂದ ಎಟಿಎಸ್‌ಗೆ ವರ್ಗಾವಣೆ ಮಾಡಲಾಗಿದೆ.

ಈ ಸಂಬಂಧ ಬಾಂಬೆ ಹೈಕೋರ್ಟ್‌ ಬುಧವಾರ ಆದೇಶ ಹೊರಡಿಸಿದೆ.  ಮಹಾರಾಷ್ಟ್ರ ಸಿಐಡಿಯ ವಿಶೇಷ ತನಿಖಾ ತಂಡವು ಈವರೆಗೂ ಪ್ರಕರಣದ ತನಿಖೆ ನಡೆಸುತ್ತಿತ್ತು.

‘ತನಿಖೆಯ ಹೊಣೆಯನ್ನು ಸಿಐಡಿಯಿಂದ ಎಟಿಎಸ್‌ಗೆ ವರ್ಗಾಯಿಸುವಂತೆ ಪಾನ್ಸರೆ ಕುಟುಂಬದವರು ಮಾಡಿರುವ ಮನವಿ ಯನ್ನು ಪುರಸ್ಕರಿಸುತ್ತಿದ್ದೇವೆ’ ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಹಾಗೂ ಶರ್ಮಿಳಾ ದೇಶ ಮುಖ್‌ ಅವರನ್ನೊಳ ಗೊಂಡ ವಿಭಾಗೀಯ ಪೀಠ ತಿಳಿಸಿದೆ.

‘ಎಡಿಜಿಯವರು ಎಟಿಎಸ್‌ನ ಉನ್ನತ ಅಧಿಕಾರಿಯಾಗಿದ್ದು, ಅವರೇ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದು ಮುಂಡರಗಿ ತಿಳಿಸಿದರು.

‘2015ರಿಂದಲೂ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಪಾನ್ಸರೆ ಅವರ ಸೊಸೆ ಮೇಘಾ ಪಾನ್ಸರೆ ಹೋದ ತಿಂಗಳು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.