Sunday, 15th December 2024

Paracetamol : ಗುಣಮಟ್ಟ ಪರೀಕ್ಷೆಯಲ್ಲಿ ಪ್ಯಾರೆಸೆಟಮಾಲ್ ಫೇಲ್; ಪರ್ಯಾಯ ಏನು?

Paracetamol

ಸಾಮಾನ್ಯವಾಗಿ ಶೀತ, ಕೆಮ್ಮು ಮತ್ತು ಜ್ವರಕ್ಕೆ (Cold, cough and fever) ಪ್ಯಾರೆಸೆಟಮಾಲ್ (Paracetamol) ಔಷಧವನ್ನೇ ಬಳಕೆ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ಇದರ ಬದಲಿಗೆ ಬೇರೆ ಔಷಧವನ್ನು ಬಳಸಬೇಕಾಗಬಹುದು. ಯಾಕೆಂದರೆ ಗುಣಮಟ್ಟ ಪರೀಕ್ಷೆಯಲ್ಲಿ (Quality Control Test) ಇದು ವಿಫಲವಾಗಿದೆ.

ಶೀತ, ಜ್ವರ, ತಲೆನೋವಿಗೆಂದು ಹೆಚ್ಚಾಗಿ ಶಿಫಾರಸ್ಸು ಮಾಡಲಾಗುವ ಪ್ಯಾರೆಸಿಟಮಾಲ್ ಮಾತ್ರೆಗಳ ಗುಣಮಟ್ಟ ಉತ್ತಮವಾಗಿಲ್ಲ ಎಂದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (CDSCO) ತಿಳಿಸಿದೆ. ಪ್ಯಾರೆಸೆಟಮಾಲ್ ನೊಂದಿಗೆ ಇನ್ನು 53 ಔಷಧಗಳು ಗುಣಮಟ್ಟ ನಿಯಂತ್ರಣ ಪರೀಕ್ಷೆಯಲ್ಲಿ ವಿಫಲವಾಗಿವೆ. ಅನೇಕ ದಶಕಗಳಿಂದ ಹೆಚ್ಚಾಗಿ ಬಳಸಲ್ಪಡುವ ಪ್ಯಾರೆಸೆಟಮಾಲ್ ನ ಗುಣಮಟ್ಟದಲ್ಲಿ ವೈಫಲ್ಯ ಅದರ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಕಳವಳ ಹೆಚ್ಚಿಸಿದೆ.

ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಇತ್ತೀಚಿಗೆ ಬಿಡುಗಡೆ ಮಾಡಿದ ಆಗಸ್ಟ್‌ನ ಗುಣಮಟ್ಟ ಉತ್ತಮವಾಗಿಲ್ಲ (Not of Standard Quality) ವರದಿಯಲ್ಲಿ 50ಕ್ಕೂ ಹೆಚ್ಚು ಔಷಧಗಳನ್ನು ಕೆಳದರ್ಜೆಯದೆಂದು ಘೋಷಿಸಲಾಗಿದೆ. ಪ್ರತಿ ತಿಂಗಳು ರಾಜ್ಯ ಔಷಧ ಅಧಿಕಾರಿಗಳು ನೀಡುವ ಮಾದರಿಯನ್ನು ಪರಿಶೀಲಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಪ್ಯಾರೆಸೆಟಮಾಲ್ ಜೊತೆಗೆ ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು, ಶೆಲ್ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಸಾಫ್ಟ್ ಜೆಲ್‌ಗಳು, ಆಂಟಾಸಿಡ್ ಪ್ಯಾನ್-ಡಿ, ಗ್ಲಿಮೆಪಿರೈಡ್ ಮತ್ತು ಅಧಿಕ ರಕ್ತದೊತ್ತಡದ ಡ್ರಗ್ ಟೆಲ್ಮಿಸಾರ್ಟನ್‌ನಂತಹ ಔಷಧಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿವೆ ಎಂದು ಈ ಬಾರಿ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.

Paracetamol

ಪ್ಯಾರೆಸೆಟಮಾಲ್ ಪರ್ಯಾಯ ಏನು?

ಕನ್ಸಲ್ಟೆಂಟ್ ಇಂಟೆನ್ಸಿವ್ ಮತ್ತು ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಡಾ. ಮಿನೇಶ್ ಮೆಹ್ತಾ ಅವರು ಪ್ಯಾರೆಸಿಟಮಾಲ್ ಬದಲಿಗೆ ಐಬುಪ್ರೊಫೇನ್, ಡಿಕ್ಲೋಫೆನಾಕ್, ಮೆಪ್ರೋಸಿನ್, ಮೆಫ್ಟಾಲ್ ಮತ್ತು ನಿಮೆಸುಲೈಡ್ ಅನ್ನು ಪರ್ಯಾಯವಾಗಿ ಸೂಚಿಸಬಹುದು ಎಂದು ತಿಳಿಸಿದ್ದಾರೆ. ಪ್ಯಾರೆಸೆಟಮಾಲ್ ನಂತೆಯೇ ಐಬುಪ್ರೊಫೇನ್ ನೋವಿಗೆ ಚಿಕಿತ್ಸೆ ನೀಡುತ್ತದೆ. ಜ್ವರ ರೋಗಲಕ್ಷಣಗಳಿಗೂ ಇದನ್ನು ಬಳಸಬಹುದು. ಉರಿಯೂತವನ್ನು ಕಡಿಮೆ ಮಾಡುವ ಸ್ಟೀರಾಯ್ಡ್ ಅಲ್ಲದ ಉರಿಯೂತದ (NSAID) ಔಷಧದ ಒಂದು ವಿಧ ಇದಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ತನ್ನ ವರದಿಯಲ್ಲಿ ಜ್ವರ, ಸಾಮಾನ್ಯ ಅಸ್ವಸ್ಥತೆ ಮತ್ತು ನೋವನ್ನು ಕಡಿಮೆ ಮಾಡಲು ನಿಮೆಸುಲೈಡ್ ಪ್ಯಾರಸಿಟಮಾಲ್‌ನಂತೆ ಪರಿಣಾಮಕಾರಿಯಾಗಿದೆ ಎಂದು ಉಲ್ಲೇಖಿಸಿದೆ. ಅಲ್ಲದೇ ನೋವು ತೀವ್ರವಾಗಿದ್ದರೆ ಪ್ಯಾರಸಿಟಮಾಲ್‌ಗಿಂತ ಡಿಕ್ಲೋಫೆನಾಕ್ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

Paracetamol

ಮನೆ ಔಷಧಗಳು

ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಇದ್ದಾಗ ತಟ್ಟನೆ ಸಹಾಯಕವಾಗುವ ಕೆಲವು ಮನೆಮದ್ದುಗಳಿವೆ. ಅವುಗಳಲ್ಲಿ ಬೆಚ್ಚಗಿನ ನೀರು, ಗಿಡಮೂಲಿಕೆ ಚಹಾ, ಸೂಪ್‌ಗಳು ಪ್ರಯೋಜನಕಾರಿಯಾಗಿದೆ. ಸಾಕಷ್ಟು ದ್ರವ ಸೇವಿಸುವುದು ದೇಹದ ನಿರ್ಜಲೀಕರಣ ತಪ್ಪಿಸುತ್ದೆ. ಗಂಟಲು ನೋವಿಗೆ ಉಪಶಮನ ನೀಡುತ್ತದೆ. ಶುಂಠಿ ಅಥವಾ ಪುದೀನಾ ಚಹಾ ಅಸ್ವಸ್ಥತೆಯನ್ನು ದೂರ ಮಾಡಿ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ಹಬೆ ತೆಗೆದುಕೊಳ್ಳುವುದು ಕೂಡ ಪ್ರಯೋಜನಕಾರಿಯಾಗಿದೆ. ಬಿಸಿ ನೀರಿನ ಹಬೆಯಮ್ಮಿ ಕನಿಷ್ಠ 10 ನಿಮಿಷಗಳ ಕಾಲ ತಲೆಯ ಮೇಲೆ ಟವೆಲ್ ಹಾಕಿ ಉಸಿರಿನ ಮೂಲಕ ತೆಗೆದುಕೊಳ್ಳುವುದು ಕೆಮ್ಮುವಿಕೆಯನ್ನು ಕಡಿಮೆ ಮಾಡುತ್ತದೆ, ಉಸಿರಾಟದ ತೊಂದರೆಯನ್ನು ದೂರ ಮಾಡುತ್ತದೆ.

ಜ್ವರದಿಂದ ಬಳಲುತ್ತಿದ್ದರೆ ಹಣೆ, ಮಣಿಕಟ್ಟು ಅಥವಾ ಕುತ್ತಿಗೆ ಬಳಿ ತಂಪಾದ, ಒದ್ದೆ ಬಟ್ಟೆಯನ್ನು ಇಡಿ. ಈ ಮನೆಮದ್ದು ಉತ್ತಮ ಪರಿಹಾರವನ್ನು ನೀಡುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಜ್ವರ ನಿಧಾನವಾಗಿ ಕಡಿಮೆಯಾಗುತ್ತದೆ.

ದೇಹವು ಸೋಂಕಿನ ವಿರುದ್ಧ ಹೋರಾಡಲು ಸಾಕಷ್ಟು ವಿಶ್ರಾಂತಿ ಅಗತ್ಯವಾಗಿರುತ್ತದೆ.

Relationship Tips: ಬ್ರಷ್, ಸ್ನಾನ ಮತ್ತು ಶೇವಿಂಗ್ ಮಾಡದಿದ್ದರೆ ಸಂಬಂಧ ಹಾಳಾಗಬಹುದು? ಹುಷಾರ್‌!

ಅರಿಶಿನ ಹಾಲು ಕುಡಿಯುವುದು ಶೀತ, ಜ್ವರ, ಮೈಕೈ ನೋವನ್ನು ನಿವಾರಿಸುತ್ತದೆ. ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಅರಿಶಿನವು ನೋವನ್ನು ನಿವಾರಿಸಲು ಮತ್ತು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.