ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಇಬ್ಬರು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಅಧಿವೇಶನ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕಂಟೋನ್ಮೆಂಟ್ ಮಸೂದೆ, ಮಲ್ಟಿ ಸ್ಟೇಟ್ ಕೋ-ಅಪರೇ ಟಿವ್ ಸೊಸೈಟೀಸ್ ಮಸೂದೆ, ತಮಿಳುನಾಡು ಮತ್ತು ಛತ್ತೀಸ್‌ಘಡದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಗೆ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 24 ಮಸೂದೆಗಳನ್ನು ಅಧಿವೇಶನ ದಲ್ಲಿ ಮಂಡಿಸಲಾಗುವುದು.
ಉಭಯ ಸದನಗಳಲ್ಲಿ ಬಾಕಿ ಉಳಿದಿರುವ ಇತರೆ 8 ಮಸೂದೆಗಳು ಅನುಮೋದನೆಗೆ ಕಾಯುತ್ತಿದ್ದು, ಸಂಸತ್ತಿನಲ್ಲಿ ಮಂಡನೆ ಯಾಗಲಿವೆ ಎನ್ನಲಾಗಿದೆ. ಅಧಿವೇಶನವು ಆಗಸ್ಟ್ 12 ರಂದು ಮುಕ್ತಾಯವಾಗಲಿದೆ.