ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಏಕೆ ಪ್ರಾರಂಭಿಸಬಾರದು ಎಂದು ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ನಂತರ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ್‌ನ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದಾರೆ.
ಮಾ.19 ರಂದು, ಪ್ರಕರಣದಲ್ಲಿ ನೀಡಲಾದ ನೋಟಿಸ್‌ಗೆ ಕಂಪನಿಯು ಪ್ರತಿಕ್ರಿಯಿಸಲು ವಿಫಲವಾದ ಕಾರಣಕ್ಕೆ ವಿನಾಯಿತಿ ನೀಡಿದ ನಂತರ ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಹಾಜರಾಗುವಂತೆ ಸೂಚಿಸಿತ್ತು. ಪತಂಜಲಿ ನೀಡಿದ ಜಾಹೀರಾತುಗಳು ರಾಮ್‌ದೇವ್ ಅವರ ಅನುಮೋದನೆಯನ್ನು ಪ್ರತಿಬಿಂಬಿಸುವುದರಿಂದ ಅವರಿಗೆ ಶೋಕಾಸ್ ನೋಟಿಸ್ ನೀಡುವುದು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ರೋಗಗಳಿಗೆ ಚಿಕಿತ್ಸೆ ನೀಡುವ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂಬ ತನ್ನ ಒಪ್ಪಂದವನ್ನು ಪಾಲಿಸದ ಕಂಪನಿಯನ್ನು ನ್ಯಾಯಾಲಯವು ತೀವ್ರವಾಗಿ ಟೀಕಿಸಿದೆ.
ನನ್ನ ಉಪಸ್ಥಿತಿಯನ್ನು ಗಮನಿಸಿ ಬೇಷರತ್ ಕ್ಷಮೆ ಕೇಳುತ್ತಿರುವುದಾಗಿ ರಾಮ್‌ದೇವ್ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಬಾಬಾ ರಾಮ್‌ದೇವ್ ಅವರು ನ್ಯಾಯಾಲಯಕ್ಕೆ ನೀಡಿದ ತಮ್ಮ ಕಂಪನಿಯ ಜವಾಬ್ದಾರಿಯನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು “ನೀವು ಎಲ್ಲಾ ಆದೇಶಗಳನ್ನು ಉಲ್ಲಂಘಿಸಿದ್ದೀರಿ” ಎಂದು ಹೇಳಿದೆ.
“ಇದು ಸಂಪೂರ್ಣ ಅವಿಧೇಯತೆ. ಕೇವಲ ಸುಪ್ರೀಂಕೋರ್ಟ್ ಮಾತ್ರವಲ್ಲ, ದೇಶಾದ್ಯಂತ ನ್ಯಾಯಾಲಯಗಳು ನೀಡಿದ ಪ್ರತಿ ಯೊಂದು ಆದೇಶವನ್ನು ಗೌರವಿಸಬೇಕು” ಎಂದು ನ್ಯಾಯಾಲಯವು ಹೇಳಿದೆ.
ಪತಂಜಲಿ ಆಯುರ್ವೇದ್ ಲಿಮಿಟೆಡ್ ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ನವೆಂಬರ್ 21, 2023 ರಂದು ಪ್ರಸ್ತುತ ಕಂಪನಿ ಸುಪ್ರೀಂಕೋರ್ಟ್‌ಗೆ ಭರವಸೆ ನೀಡಿತ್ತು, ಅದರಲ್ಲೂ ವಿಶೇಷವಾಗಿ ತಾನು ತಯಾರಿಸಿದ ಮತ್ತು ಮಾರಾಟ ಮಾಡುವ ಉತ್ಪನ್ನಗಳ ಜಾಹೀರಾತು ಅಥವಾ ಬ್ರ್ಯಾಂಡಿಂಗ್‌ಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿತ್ತು.