ಡೆಹ್ರಾಡೂನ್: ಉತ್ತರಾಖಂಡದ ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರ್ಯಾಂಡ್ ರಾಯಭಾರಿಯನ್ನಾಗಿ ಇಂಡಿಯನ್ ಐಡಲ್ ವಿಜೇತ ಪವನ್‌ದೀಪ್ ರಾಜನ್ ಅವರನ್ನು ಮಾಡಲಾಗಿದೆ.
ಪವನ್‌ದೀಪ್ ಅವರು ಬುಧವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿ ಮಾಡಿದ ವೇಳೆ ಮುಖ್ಯಮಂತ್ರಿ ಈ ಘೋಷಣೆ ಮಾಡಿದರು. ಪವನ್‌ದೀಪ್ ಅವರು ತಮ್ಮ ಪ್ರತಿಭೆಯ ಮೂಲಕ ಸಂಗೀತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಉತ್ತರಾಖಂಡವನ್ನು ದೇಶದೆಲ್ಲೆಡೆ ಮತ್ತು ವಿಶ್ವ ದಲ್ಲಿ ಖ್ಯಾತಿಗೊಳಿಸಿದ್ದಾರೆ’ ಎಂದು ಧಾಮಿ ಪ್ರಶಂಸಿಸಿದ್ದಾರೆ.
23 ವರ್ಷದ ಪವನ್‌ದೀಪ್ ರಾಜನ್ ಅವರು ಆ.15ರಂದು ಕೊನೆಗೊಂಡ ಇಂಡಿಯನ್ ಐಡಲ್ ರಿಯಾಲಿಟಿ ಶೋ ಸ್ಪರ್ಧೆಯ 12ನೇ ಆವೃತ್ತಿಯ ವಿಜೇತ ರಾಗಿದ್ದರು. ಅವರು ಉತ್ತರಾಖಂಡದ ಕುಮಾನ್ ಪ್ರದೇಶದ ಚಂಪಾವತ್ ನಿವಾಸಿಯಾಗಿದ್ದಾರೆ.