Thursday, 21st November 2024

Pawan Kalyan: ತಿರುಪತಿ ಭೇಟಿಗೂ ಮುನ್ನ ಪತ್ರವೊಂದಕ್ಕೆ ಸಹಿ ಹಾಕಿದ ಪವನ್‌ ಕಲ್ಯಾಣ್‌ ಪುತ್ರಿ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

pawan kalyan

ಹೈದರಾಬಾದ್‌: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ಪ್ರಕರಣದ ನಡುವೆಯೇ ದೇಗುಲಕ್ಕೇ ಭೇಟಿ ನೀಡಲು ಆಂಧ್ರಪ್ರದೇಶದ ಡಿಸಿಎಂ(Andhra Pradesh DCM) ಪವನ್‌ ಕಲ್ಯಾಣ್‌(Pawan Kalyan) ಪುತ್ರಿಗೆ ಅನುಮತಿ ಸಿಕ್ಕಿದೆ. ಪವನ್‌ ಕಲ್ಯಾಣ್‌ ಅವರ ಕಿರಿಯ ಪುತ್ರಿ ಪಲಿನಾ ಅಂಜನಿ ಕೊನಿಡೆಲಾ ಅವರು ತಿರುಪತಿ ತಿರುಮಲ ದೇವಸ್ಥಾನಂನ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪವನ್ ಕಲ್ಯಾಣ್ ಅವರು ತಿರುಮಲದಲ್ಲಿ ಹಮ್ಮಿಕೊಂಡಿದ್ದ ಪ್ರಾಯಶ್ಚಿತ್ತ ದೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ವಿವಾದದ ಬೆನ್ನಲ್ಲೇ ಕಳೆದ ತಿಂಗಳು 22ರಂದು ದೀಕ್ಷೆ ಸ್ವೀಕರಿಸಿದ್ದ ಪವನ್ ಕಲ್ಯಾಣ್‌, 11 ದಿನಗಳ ದೀಕ್ಷೆಯ ಬಳಿಕ ಬುಧವಾರ ಬೆಳಗ್ಗೆ ತಿರುಮಲದಲ್ಲಿ ದೀಕ್ಷೆಯನ್ನು ಸಂಪನ್ನಗೊಳಿಸಿದರು. ಮಂಗಳವಾರ ಸಂಜೆ ಪವನ್ ಕಲ್ಯಾಣ್ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟಕ್ಕೆ ತಲುಪಿದರು. ಅವರು ಗೋವಿಂದನನ್ನು ಪ್ರಾರ್ಥಿಸುತ್ತಾ 3,550 ಮೆಟ್ಟಿಲುಗಳನ್ನು ಏರಿದರು.

ದೇವರ ದರ್ಶನಕ್ಕೂ ಮುನ್ನ ಅವರು ಘೋಷಣೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರಿ ಪಾಲಿನಾ ಅಂಜನಿ ಕೊನಿಡೇಲಾ ಅವರೂ ದೇವರ ದರ್ಶನಕ್ಕೂ ಮುನ್ನ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಮಾಡಿದ್ದಾರೆ. ಟಿಟಿಡಿ ನೌಕರರು ತಂದಿದ್ದ ಡಿಕ್ಲರೇಶನ್ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಪಲಿನಾ ಅಂಜನಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಪವನ್ ಕಲ್ಯಾಣ್ ಕೂಡ ಸಹಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಏನಿದು ಘೋಷಣಾ ಪತ್ರ?

ಇನ್ನು ಈ ಘೋಷಣಾ ಪತ್ರ ಅಥವಾ ಡಿಕ್ಲರೇಷನ್‌ ಪತ್ರ ಅಂದ್ರೆ ಏನು ಎಂಬುದನ್ನು ನೋಡುವುದಾದರೆ, ಇದು ದೇವಸ್ಥಾನಂ ಹೊರಡಿಸಿರುವ ಪತ್ರವಾಗಿದೆ. ದೇವಾಲಯದ ನಿಯಮಗಳ ಪ್ರಕಾರ, ಹಿಂದೂಗಳಲ್ಲದವರು ಮತ್ತು ವಿದೇಶಿಗರು ದೇವಾಲಯಕ್ಕೆ ಭೇಟಿ ನೀಡುವ ಮೊದಲು ದೇವರ ಮೇಲಿನ ನಂಬಿಕೆಯ ಘೋಷಣೆಗೆ ಸಹಿ ಹಾಕಬೇಕು. ಪೋಲಿನಾ ಅವರು ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ ಪುತ್ರಿ. ಪೋಲಿನಾ ವಿದೇಸಿ ಪೌರತ್ವ ಹೊಂದಿದ್ದಾರೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ನೀಡಿದ ಘೋಷಣೆಯ ನಮೂನೆಗೆ ಸಹಿ ಹಾಕಿದರು. ಅವಳು ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ, ಶ್ರೀ ಕಲ್ಯಾಣ್ ಅವರು ಕಾಗದಗಳಿಗೆ ಸಹಿ ಹಾಕಿದರು. ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ವಿವಾದ ಬಳಿಕ ದೇಗುಲಕ್ಕೆ ಭೇಟಿ ನೀಡುವುದಾಗಿ ಘೋಷಣೆ ಹೊರಡಿಸಿದಾಗ ಈ ಘೋಷಣಾ ಪತ್ರಕ್ಕೆ ಸಹಿ ಹಾಕಿದರೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಾಗಿ ಟಿಟಿಡಿ ಹೇಳಿತ್ತು.

ಮತ್ತೊಂದೆಡೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಸೇರಿಸಿದ ವಿವಾದ ಕುರಿತ ಎಸ್‌ಐಟಿ (SIT) ತನಿಖೆಗೆ ತಡೆ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ಈ ಬಗೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತ್ತು. ಜೊತೆಗೆ, ಸುಪ್ರೀಂನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುರಿಂದ ಅ.3ರವರೆಗೆ ತನಿಖೆಯನ್ನು ನಿಲ್ಲಿಸುತ್ತೇವೆ ಎಂದು ಆಂಧ್ರ ಪ್ರದೇಶ ಡಿಜಿಪಿ ಹೇಳಿದ್ದಾರೆ.

ದೇವರ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಹಾಗಾಗಿ ನೀವೇ ರಚಿಸಿದ ಎಸ್‌ಐಟಿಯಿಂದ ತನಿಖೆ ನಡೆಸುವ ಬದಲು ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತ ಪಡಿಸಿತ್ತು. ಎಂದರೆ ಪರೋಕ್ಷವಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಗೆ ಕೋರ್ಟ್‌ ಸೂಚಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddu Row : ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಎಸ್ಐಟಿ ತನಿಖೆ ತಾತ್ಕಾಲಿಕ ಸ್ಥಗಿತ