ಮುಂಬೈ : ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ( Baba Siddique) ಹತ್ಯೆಯ ನಂತರ ಸಲ್ಮಾನ್ ಖಾನ್‌ಗೆ (death threat to Salman Khan) ಜೀವ ಬೆದರಿಕೆ ಜೋರಾಗಿದ್ದು, ಇದೀಗ ಮತ್ತೊಬ್ಬ ಸಲ್ಮಾನ್‌ಗೆ (Salman Khan) ಜೀವ ಬೆದರಿಕೆ ಹಾಕಿದ್ದಾನೆ. ಮುಂಬೈನ ಟ್ರಾಫಿಕ್ ಪೊಲೀಸರ ಸಂಚಾರ ಸಹಾಯವಾಣಿಗೆ ಸಂದೇಶ ಕಳುಹಿಸಿರುವ ವ್ಯಕ್ತಿ 2 ಕೋಟಿ ರೂಪಾಯಿಗೆ ಗೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡಿ ಇಲ್ಲವೇ ನಿಮ್ಮನ್ನು ಕೊಲೆ ಮಾಡುತ್ತೇಎ ಎಂದು ಸಂದೇಶ ಕಳುಹಿಸಿದ್ದಾನೆ.
ಬೆದರಿಕೆ ಸಂದೇಶ ಬಂದ ನಂತರ ಮುಂಬೈನ ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಅಕ್ಟೋಬರ್ 18 ರಂದು ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ತನ್ನನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ( Lawrence Bishnoi) ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮುಂಬೈನ ಸಂಚಾರಿ ಪೊಲೀಸ್ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ. 5 ಕೋಟಿ ರೂ. ನೀಡಿ ಇಲ್ಲವೇ ಬಿಷ್ಣೋಯ್ ಸಮಾಜದವರಿಗೆ ಕ್ಷಮೆ ಕೇಳಿ, ಇಲ್ಲವಾದರೆ ಬಾಬಾ ಸಿದ್ಧಿಕಿಗೆ ಆದ ಗತಿಯೇ ನಿಮಗೂ ಬರುತ್ತದೆ. ನಿಮ್ಮನ್ನೂ ಅದೇ ರೀತಿಯಲ್ಲಿ ಕೊಲೆ ಮಾಡಲಾಗುವುದು ಎಂದು ಸಂದೇಶ ಕಳುಹಿಸಿದ್ದ.
ಇದನ್ನೂ ಓದಿ: Bishnoi Gang: ಸಲ್ಮಾನ್‌ನಿಂದ ದೂರ ಇರಿ…ನಿಮ್ಮ ಮೇಲೂ ನಮ್ಮ ನಿಗಾ ಇದೆ; ಸಂಸದ ಪಪ್ಪು ಯಾದವ್‌ಗೂ ಬಿಷ್ಣೋಯ್ ಗ್ಯಾಂಗ್ ಬೆದರಿಕೆ
ಬೆದರಿಕೆ ಹಾಕಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಕೆಲ ದಿನಗಳ ನಂತರ ಅದೇ ವ್ಯಕ್ತಿ ಮತ್ತೆ ಮುಂಬೈ ಸಂಚಾರ ಸಹಾಯವಾಣಿಗೆ ಸಂದೇಶ ಕಳುಹಿಸಿ ಕ್ಷಮಿಸಿ ತಪ್ಪಾಗಿ ಕಳುಹಿಸಲಾಗಿದೆ ಎಂದು ಹೇಳಿದ್ದ . ಸಂದೇಶದ ಆಧಾರದ ಮೇಲೆ ಆತನನ್ನು ಬಂಧಿಸಿದ ಪೊಲೀಸರು ಆತ ಜೆಮ್‌ಶೆಡ್‌ಪುರದ ತರಕಾರಿ ವ್ಯಾಪಾರಿ ಎಂದು ಗುರುತಿಸಿದ್ದಾರೆ.
ಬಾಬಾ ಸಿದ್ಧಕಿ ಪುತ್ರ ಜೀಶಾನ್ ಸಿದ್ದಿಕಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ ಆರೋಪದ ಮೇಲೆ 20 ವರ್ಷದ ವ್ಯಕ್ತಿಯನ್ನು ನೋಯ್ಡಾದ ಸೆಕ್ಟರ್ 39 ರಿಂದ ಬಂಧಿಸಲಾಗಿದೆ. ಮುಂಬೈ ಪೊಲೀಸರು ಮೊಹಮ್ಮದ್ ತಯ್ಯಬ್ ವಶಕ್ಕೆ ತೆಗೆದುಕೊಂಡಿದ್ದು, ಆತನನ್ನು ಟ್ರಾನ್ಸಿಟ್ ರಿಮಾಂಡ್ ಗೆ ಕರೆದೊಯ್ದಿದ್ದಾರೆ.
ಇವೆಲ್ಲವುದರ ನಡುವೆ ಸಲ್ಮಾನ್ ಖಾನ್‌ಗೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ ಲಾರೆನ್ಸ್ ಬಿಷ್ಣೋಯಿಗೆ ( Lawrence Bishnoi) ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ವಿಡಿಯೊ ಮಾಡಿ ಹೆದರಿಕೆ ಹಾಕಿರುವ ಆತ ಸಲ್ಮಾನ್ ಖಾನ್‌ಗೆ ಎನಾದರೂ ಆದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಬಳಿ 2,000 ಶೂಟರ್‌ಗಳಿದ್ದರೆ ನಮ್ಮ ಬಳಿ 5,000 ಶೂಟರ್‌ಗಳಿದ್ದಾರೆ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾನೆ. ಬೆದರಿಕೆ ಹಾಕಿರುವ ವ್ಯಕ್ತಿ ಉತ್ತರ ಪ್ರದೇಶದವ( UP) ಎಂದು ಗುರುತಿಸಲಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.