Sunday, 15th December 2024

ಮುಸ್ಲಿಮರ ವಿರುದ್ಧ ಟೀಕೆ: ಪಿ.ಸಿ.ಜಾರ್ಜ್‌ ವಶಕ್ಕೆ

ತಿರುವನಂತಪುರಂ: ಮುಸ್ಲಿಮರ ವಿರುದ್ಧ ಟೀಕೆಗಳನ್ನು ಮಾಡಿದ ಕೇರಳದ ಹಿರಿಯ ರಾಜಕಾರಣಿ ಪಿ.ಸಿ. ಜಾರ್ಜ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿರುವನಂತಪುರಂ ಪೊಲೀಸರು ಮಾಜಿ ಶಾಸಕರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮಾಜಿ ಶಾಸಕರ ಬೆಂಬಲಿಗರು ಠಾಣೆ ಮುಂದೆ ಜಮಾವಣೆಯಾಗುವ ನಿರೀಕ್ಷೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಿರುವನಂತಪುರಂನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಪಿ. ಸಿ. ಜಾರ್ಜ್‌ ಭಾಷಣ ಮಾಡಿದ್ದರು. ಮುಸ್ಲಿಂಮರು ನಡೆಸುವ ರೆಸ್ಟೋ ರೆಂಟ್‌ಗಳಿಗೆ ಮುಸ್ಲಿಂಮೇತರ ರು ಭೇಟಿ ನೀಡಬಾರದು ಎಂದು ಭಾಷಣದಲ್ಲಿ ಹೇಳುವ ಮೂಲಕ ವಿವಾದ ಎಬ್ಬಿಸಿದ್ದರು.

ಕೇರಳದ ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ತಿರುವನಂತಪುರ ಪೊಲೀಸರು ಪಿ. ಸಿ. ಜಾರ್ಜ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದರು.

ಪಿ. ಸಿ. ಜಾರ್ಜ್ ಕೇರಳದ ಹಿರಿಯ ರಾಜಕೀಯ ನಾಯಕ 7 ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪೂಂಜರ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕೇರಳ ವಿಧಾನಸಭೆ ಚೀಫ್ ವಿಪ್ ಕೂಡಾ ಆಗಿದ್ದರು. 30 ವರ್ಷಕ್ಕೂ ಹೆಚ್ಚು ಕಾಲ ಕೇರಳದಲ್ಲಿ ರಾಜಕೀಯ ನಡೆಸಿದ್ದಾರೆ.