Friday, 20th September 2024

ಪೆಗಾಸಸ್ ಅಡ್ಡಿ: ಸಂಸತ್ ಕಲಾಪ ಪದೇ ಪದೇ ಮುಂದೂಡಿಕೆ

ನವದೆಹಲಿ: ಪೆಗಾಸಸ್ ಸ್ನೂಪಿಂಗ್ ವಿವಾದ ಮತ್ತೆ ಸಂಸತ್ ಕಲಾಪಕ್ಕೆ ಅಡ್ಡಿಯಾಗಿದ್ದು, ಮತ್ತೆ ಉಭಯ ಸದನಗಳನ್ನು 1 ಗಂಟೆಗಳ ಕಾಲ ಮುಂದೂಡಲಾಯಿತು.

ವಿಪಕ್ಷಗಳ ಸದಸ್ಯರು, ನಿಯಮ 267 ರ ಅಡಿಯಲ್ಲಿ 15 ನೋಟಿಸ್‌ಗಳನ್ನು ನೀಡಿದ್ದು, ತಮ್ಮ ವಿಷಯದ ಬಗ್ಗೆ ಚರ್ಚೆಗೆ ಕಾಲಾವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಸದನದ ಬಾವಿ ಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಸದಸ್ಯರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರಾದರೂ ಶಾಂತಿ ಕಾಪಾಡದ ಹಿನ್ನಲೆಯಲ್ಲಿ ಸದನವನ್ನು ಒಂದು ಗಂಟೆಗಳ ಕಾಲ ಮೂಂದೂಡಿದರು. ಸೋಮವಾರ ನೀಡಲಾಗಿದ್ದ 17 ನೋಟಿಸ್ ಗಳನ್ನು ತಿರಸ್ಕರಿಸಿದಂತೆಯೇ ಇಂದೂ ಕೂಡ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಸದಸ್ಯರ 15 ನೋಟಿಸ್ ಗಳನ್ನು ತಿರಸ್ಕರಿಸಿ ದರು.

ಅಧ್ಯಕ್ಷರಿಗೆ ನೋಟಿಸ್ ನೀಡುವ ಮೂಲಕ ಚರ್ಚೆ ಮಾಡಬೇಕಿದೆ ಎಂಬುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಇದೇ ಕಾರಣಕ್ಕೆ ಸೋಮವಾರ ಮತ್ತು ಮಂಗಳವಾರ ನೀಡಲಾದ ನೋಟಿಸ್‌ಗಳು ಹೆಚ್ಚಾಗಿ “ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದೆ. ಅವುಗಳಲ್ಲಿ ಕೆಲವು ದೀರ್ಘಕಾಲದವರೆಗೆ ನಡೆಯುತ್ತಿವೆ, ಮತ್ತೆ ಕೆಲವು ಮೊದಲೇ ಚರ್ಚಿಸ   ಲಾಗಿದೆ ಎಂದು ಹೇಳಿದರು.

ಆದರೆ ರಾಜ್ಯಸಭಾಧ್ಯಕ್ಷ ನಾಯ್ಡು ಅವರು, ಪಟ್ಟಿ ಮಾಡಲಾದ ಅಧಿಕೃತ ನೋಟಿಸ್ ಗಳನ್ನು ಮೇಜಿನ ಮೇಲೆ ಇಡಬೇಕೆಂದು ಹೇಳಿದರು. ಈ ವೇಳೆ ಸಮಾಧಾನ ಗೊಳ್ಳದ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕಲಾಪವನ್ನು ಮಗದೊಮ್ಮೆ ಮುಂದೂಡಲಾಯಿತು.