Thursday, 12th December 2024

ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿ: 64 ಮಂದಿಗೆ ಗಾಯ

ದೋಹಿ: ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟು 64 ಮಂದಿ ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ನಾರ್ತುವಾ ಗ್ರಾಮದಲ್ಲಿ ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಡಿಜಿಟಲ್ ಶೋ ನಡೆಯುತ್ತಿದ್ದು ಸುಮಾರು 400 ಮಂದಿ ನೋಡು ತ್ತಿದ್ದರು. ಹ್ಯಾಲೊಜೆನ್ ಲೈಟ್ ಹೆ ಬಿಸಿಯಾದ ಬಟ್ಟೆದೆ ಬೆಂಕಿ ಹೊತ್ತಿಕೊಂಡು ಇಡೀ ಪೆಂಡಾಲ್ ಬೂದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಔರೈ ಪೊಲೀಸ್ ಠಾಣೆಯಿಂದ ಸಮೀಪದಲ್ಲೇ ಇರುವ ನಾರ್ತುವಾ ಗ್ರಾಮದ ದುರ್ಗಾಪೂಜಾ ಕಾರ್ಯಕ್ರಮ ಕಳೆದ 7 ದಿನದಿಂದ ನಡೆದಿತ್ತು ಅದರೆ ರಾತ್ರಿ ಬೆಂಕಿ ಆನಾಹುತ ಸಂಭವಿಸಿ ದಾಗ ಭಯಬೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಅಂಕುಶ್ ಸೋನಿ (12), ಜಯ ದೇವಿ (45) ಮತ್ತು ನವೀನ್ (10) ಸಾವನ್ನಪ್ಪಿದ್ದಾರೆ. 67 ಜನರು ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ತಿಳಿಸಿದ್ದಾರೆ.

ಹೆಚ್ಚುವರಿ ಮಹಾನಿರ್ದೇಶಕ ರಾಮ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು ತನಿಖೆ ನಡೆಸುತತ್ತಿದ್ದು ,ಔರೈ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸ ಲಾಗಿದೆ ಎಂದು ಪೊಲೀಸ್ ವರಿಧಿಷ್ಠಾಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಏಕತಾ ಕ್ಲಬ್ ಪೂಜಾ ಸಮಿತಿಯಿಂದ ದುರ್ಗಾ ಪೂಜೆಯನ್ನು ಆಯೋಜಿಸಲಾಗಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವಂತೆ ಆದಿತ್ಯನಾಥ್ ಅಕಾರಿಗಳಿಗೆ ತಿಳಿಸಿದ್ದಾರೆ