ರಾಂಚಿ: ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸಮ್ಮಿಶ್ರ ಸರ್ಕಾರಕ್ಕೆ ನಾಲ್ಕು ವರ್ಷಗಳ ಪೂರ್ಣಗೊಳಿಸಿದ ಹಿನ್ನೆಲೆ ದಲಿತರಿಗೆ 50 ವರ್ಷ ವಯಸ್ಸಿಗೇ ಪಿಂಚಣಿ ಘೋಷಿಸಿದ್ದಾರೆ.
ರಾಂಚಿಯ ಐತಿಹಾಸಿಕ ಮೊರ್ಹಬಾದಿ ಮೈದಾನದಲ್ಲಿ ಸರ್ಕಾರ ನಾಲ್ಕು ವರ್ಷಗಳ ವಿಜಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿ ಸಿತು.
ಈ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ನೀತಿಗಳು ಮತ್ತು ಸಾಧನೆಗಳನ್ನು ಘೋಷಿಸುವುದರೊಂದಿಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದರು. ರಾಜ್ಯದ ದಲಿತರು ಮತ್ತು ಆದಿವಾಸಿಗಳಿಗೆ ಹೊಸ ವರ್ಷದ ಉಡುಗೊರೆಯನ್ನು ಘೋಷಿಸಲಾಯಿತು. ರಾಜ್ಯ ದಲ್ಲಿ ಆದಿವಾಸಿ ಮತ್ತು ದಲಿತರ 60 ವರ್ಷದ ಪಿಂಚಣಿ ಅರ್ಹತೆಯನ್ನು 50 ವರ್ಷಕ್ಕೆ ಬದಲಾವಣೆ ಮಾಡಿ ಘೋಷಣೆ ಮಾಡಲಾಗುತ್ತದೆ ಎಂದರು.
ಇನ್ನು ಮುಂದೆ ರಾಜ್ಯದ ಕಂಪನಿಗಳಲ್ಲಿ ಶೇ.75 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಹೇಮಂತ್ ಸೊರೇನ್ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ 662 ಶಿಕ್ಷಕರು, ಆರೋಗ್ಯ ಇಲಾಖೆಯ 307 ವೈದ್ಯಕೀಯ ಸಿಬ್ಬಂದಿ ಹಾಗೂ ಇತರರಿಗೆ ನೇಮಕಾತಿ ಪತ್ರ ವಿತರಿಸ ಲಾಯಿತು.
ಇದರಡಿ ಇಲ್ಲಿಯವರೆಗೆ 3500 ರೂ.ಕೋಟಿಗಳನ್ನು ವಿತರಿಸಲಾಗಿದೆ. 31 ಲಕ್ಷ ಜನರಿಗೆ ಆಸ್ತಿ ಪತ್ರಗಳನ್ನು ನೀಡಲಾಗಿದೆ. ಜೊತೆಗೆ 12,475 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ.