Sunday, 15th December 2024

2ನೇ ಹಂತದ ಮತದಾನ: ಅಸ್ಸಾಂನಲ್ಲಿ ಶೇ.21.71, ಪಶ್ಚಿಮ ಬಂಗಾಳದಲ್ಲಿ ಶೇ.29.27 ಮತ ಚಲಾವಣೆ

ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ 2ನೇ ಹಂತದ ಚುನಾವಣೆ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅಸ್ಸಾಂನಲ್ಲಿ ಈ ವರೆಗೂ ಶೇ.21.71 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ.29.27ರಷ್ಟು ಮತದಾನವಾಗಿದೆ.

ಅಸ್ಸಾಂನ 39 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ 171 ಅಭ್ಯರ್ಥಿಗಳು ಹಾಗೂ ಅಸ್ಸಾಂನ 345 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಕೂಡ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 2ನೇ ಹಂತದಲ್ಲಿ ನಂದಿಗ್ರಾಮ್‌ನಲ್ಲೂ ಮತದಾನ ನಡೆಯುತ್ತಿದೆ.. ಹೀಗಾಗಿ ಎಲ್ಲರ ಕಣ್ಣುಗಳು ನಂದಿ ಗ್ರಾಮ್ ವಿಧಾನಸಭಾ ಕ್ಷೇತ್ರದತ್ತ ನೆಟ್ಟಿವೆ, ಅಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಮಿತ್ರ ಮತ್ತು ಬಿಜೆಪಿ ಅಭ್ಯರ್ಥಿ ಶುಭೇಂಡು ಅಧಿಕಾರಿ ವಿರುದ್ಧ ಕಣದಲ್ಲಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಮಮತಾ ಮತ್ತು ಶುಭೇಂಡು ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily