Thursday, 21st November 2024

49 ಲೋಕಸಭಾ ಕ್ಷೇತ್ರಗಳಿಗೆ ಮತದಾನ: ಶೇಖಡಾವಾರು ವಿವರ ಹೀಗಿದೆ…

ನವದೆಹಲಿ: ಸೋಮವಾರ ಐದನೇ ಹಂತದ ಮತದಾನ ನಡೆದಿದೆ. 8 ರಾಜ್ಯಗಳ ಒಟ್ಟು 49 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬೆಳಗ್ಗೆ ಹಲವು ಪ್ರದೇಶದಲ್ಲಿ ಮತದಾನ ಚುರುಕುಗೊಂಡಿದೆ.

ಬಿಹಾರದಲ್ಲಿ 34.62%, ಜಮ್ಮು ಮತ್ತು ಕಾಶ್ಮೀರದಲ್ಲಿ 34.79%, ಜಾರ್ಖಂಡ್‌ದಲ್ಲಿ 41.89%, ಲಡಾಖ್‌ದಲ್ಲಿ 52.01%, ಮಹಾರಾಷ್ಟ್ರದಲ್ಲಿ 27.78%, ಒಡಿಶಾದಲ್ಲಿ 35.31%, ಉತ್ತರ ಪ್ರದೇಶದಲ್ಲಿ 39.55%, ಪಶ್ಚಿಮ ಬಂಗಾಳದಲ್ಲಿ 48.41% ಮತದಾನವಾಗಿದೆ.

ಐದನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ ಏಳು, ಬೀಹಾರದ ಐದು, ಓಡಿಶಾದ ಐದು, ಜಾರ್ಖಂಡ್‌ದ ಮೂರು, ಜಮ್ಮು ಮತ್ತು ಕಾಶ್ಮೀರ್‌ ಹಾಗೂ ಲಡಾಕ್‌ ತಲಾ ಒಂದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಒಟ್ಟು ಏಳು ಹಂತದಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು, ಈಗಾಗಲೇ ನಾಲ್ಕು ಹಂತದ ಮತದಾನ ಮುಕ್ತಾಯವಾಗಿದೆ.

ಮೇ 25 ರಂದು ಆರನೇ ಹಂತದ ಮತದಾನ ಹಾಗೂ ಜೂನ್‌ 1ರಂದು ಏಳನೇ ಹಂತದ ಮತದಾನ ನಡೆಯಲಿದೆ. ಮತ ಏಣಿಕೆ ಕಾರ್ಯ ಜೂನ್‌ 4 ರಂದು ನಡೆಯಲಿದೆ.