Thursday, 12th December 2024

ಎರಡನೇ ಮದುವೆಯಾಗಲು ಅನುಮತಿ ಕಡ್ಡಾಯ: ಬಿಹಾರ ಸರ್ಕಾರ

ಪಾಟ್ನಾ: ಬಿಹಾರ ಸರ್ಕಾರದ ಉದ್ಯೋಗಿಗಳು ಎರಡನೇ ಮದುವೆಯಾಗಲು ಬಯಸಿ ದ್ದಲ್ಲಿ ತಮ್ಮ ಇಲಾಖೆಗಳಿಗೆ ಸೂಚಿಸಿ, ಅನುಮತಿ ಪಡೆದ ನಂತರವೇ ಮುಂದುವರಿಯ ಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿಸಬೇಕು ಮತ್ತು ಅಗತ್ಯ ಅನುಮತಿ ಪಡೆದ ನಂತರವೇ ಎರಡನೇ ವಿವಾಹಕ್ಕೆ ಅರ್ಹರಾಗಬೇಕೆಂದು ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯಲ್ಲಿ ಹೇಳಿದೆ.

ಅಧಿಸೂಚನೆಯ ಪ್ರಕಾರ, ಎರಡನೇ ಬಾರಿಗೆ ಮದುವೆಯಾಗಲು ಯೋಜಿಸುವ ಯಾವುದೇ ಉದ್ಯೋಗಿ ಮೊದಲು ಸಂಗಾತಿಯಿಂದ ವಿಚ್ಛೇದನ ಪಡೆಯಬೇಕು ಮತ್ತು ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು. ಉದ್ಯೋಗಿಯ ಮೊದಲ ಪತ್ನಿ ಅಥವಾ ಪತಿ ವಿರೋಧಿಸಿ ದರೆ, ಎರಡನೇ ಪತ್ನಿ ಅಥವಾ ಪತಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಿರಾಕರಿಸಲಾಗುತ್ತದೆ ಎಂದು ಹೇಳಿದೆ.

ಸರ್ಕಾರಿ ನೌಕರನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಎರಡನೇ ಮದುವೆಯಾಗಿ ಸೇವಾ ಅವಧಿಯಲ್ಲಿ ಮರಣ ಹೊಂದಿದರೆ, ಎರಡನೇ ಹೆಂಡತಿ/ಪತಿ ಮತ್ತು ಅವರ ಮಕ್ಕಳು ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಹ ರಾಗಿರುವುದಿಲ್ಲ.