Friday, 22nd November 2024

ನೀತಿ ಉಲ್ಲಂಘನೆ: ಪ್ಲೇ ಸ್ಟೋರ್‌’ನಿಂದ ವೈಯಕ್ತಿಕ ಸಾಲದ ಅಪ್ಲಿಕೇಶನ್ ’ಡಿಲೀಟ್’

ನವದೆಹಲಿ: ಗ್ರಾಹಕರಿಗೆ ಬಡ್ಡಿ ದರ ವಿಧಿಸುತ್ತಿದ್ದ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಗೂಗಲ್‌ ಇಂಡಿಯಾ ಪ್ಲೇ ಸ್ಟೋರ್‌ ನಿಂದ ತೆಗೆದುಹಾಕಿದೆ.

ತನ್ನ ನೀತಿಗಳನ್ನು ಉಲ್ಲಂಘಿಸಿದ ಆಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ಪ್ರಕಟಿಸಿದೆ. ಆದಾಗ್ಯೂ, ತೆಗೆದುಹಾಕಲಾದ ಅಪ್ಲಿಕೇಶನ್‌ಗಳ ಸಂಖ್ಯೆ ಅಥವಾ ಅಪ್ಲಿಕೇಶನ್‌ಗಳನ್ನು ಗೂಗಲ್ ಬಹಿರಂಗಪಡಿಸಿಲ್ಲ.

ಬಳಕೆದಾರರ ದೂರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ಮಾಹಿತಿ ಆಧಾರದಲ್ಲಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸ ಲಾಗಿದೆ. ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಲಾದ ಕನಿಷ್ಠ 10 ಭಾರತೀಯ ಸಾಲ ಅಪ್ಲಿಕೇಶನ್‌ಗಳು ಕೂಡ ಗೂಗಲ್ ನಿಯಮಗಳನ್ನು ಉಲ್ಲಂಘಿಸಲಾಗಿದೆ.

60 ದಿನಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣ ಮರುಪಾವತಿ ಅಗತ್ಯವಿರುವ ವೈಯಕ್ತಿಕ ಸಾಲಗಳನ್ನು ನೀಡುವ ನಿಷೇಧವನ್ನು ಉಲ್ಲಂಘಿಸುತ್ತಿರುವುದಾಗಿ 10 ಮಿನಿಟ್ ಲೋನ್, ಎಕ್ಸ್-ಮನಿ ಮತ್ತು ಎಕ್ಸ್ಟ್ರಾ ಮುದ್ರಾ ಮತ್ತು ಸ್ಟೂಕ್ರೆಡ್ ಎಂಬ ನಾಲ್ಕು ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.