Thursday, 12th December 2024

ಎರಡು ದಿನಗಳಿಂದ ಆಸ್ಪತ್ರೆಯ ಲಿಫ್ಟ್’ನಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ತಿರುವನಂತಪುರಂ : ಕಳೆದ ಎರಡು ದಿನಗಳಿಂದ ಆಸ್ಪತ್ರೆಯ ಲಿಫ್ಟ್ ಒಳಗೆ ಸಿಲುಕಿದ್ದ 59 ವರ್ಷದ ವ್ಯಕ್ತಿಯನ್ನು ಸೋಮವಾರ ಬೆಳಿಗ್ಗೆ ಲಿಫ್ಟ್ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ.

ಉಳ್ಳೂರು ನಿವಾಸಿ ರವೀಂದ್ರನ್ ನಾಯರ್ (59) ಶನಿವಾರದಿಂದ ಸರ್ಕಾರಿ ವೈದ್ಯಕೀಯ ಕಾಲೇಜಿನ ಒಪಿ ಬ್ಲಾಕ್ ನ ಲಿಫ್ಟ್ ಒಳಗೆ ಸಿಲುಕಿಕೊಂಡಿದ್ದರು.

“ಅವರು ಮೊದಲ ಮಹಡಿಗೆ ಹೋಗಲು ಲಿಫ್ಟ್ ಹತ್ತಿದರು. ಆದರೆ ಲಿಫ್ಟ್ ಕೆಳಗೆ ಬಂದಿತು ಮತ್ತು ತೆರೆಯಲಿಲ್ಲ ಎಂದು ಹೇಳುತ್ತಾರೆ. ಅವರು ಸಹಾಯಕ್ಕಾಗಿ ಕೂಗಿದರೂ ಯಾರೂ ಬರಲಿಲ್ಲ ಎನ್ನಲಾಗಿದೆ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಲಿಫ್ಟ್ ಆಪರೇಟರ್ ಎಂದಿನಂತೆ ತನ್ನ ಕೆಲಸ ಕೆಲಸಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯ ಕುಟುಂಬವು ಭಾನುವಾರ ಮಿಸ್ಸಿಂಗ್ ಪ್ರಕರಣವನ್ನು ದಾಖಲಿಸಿತ್ತು. ಸದ್ಯ, ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.