ಪೆಟ್ರೋಲ್ ಟ್ಯಾಂಕರ್ ಸ್ಫೋಟದ ತೀವ್ರತೆ ಹೆಚ್ಚಾಗಿದ್ದು, ಟ್ಯಾಂಕರ್ ಗಾಳಿಯಲ್ಲಿ ಸುಮಾರು 10 ಅಡಿ ಎತ್ತರಕ್ಕೆ ಹಾರಿದೆ ಎಂದು ಹೇಳಲಾಗುತ್ತಿದೆ. ಪೆಟ್ರೋಲಿಯಂ ಟ್ಯಾಂಕರ್ನಲ್ಲಿ ವೆಲ್ಡಿಂಗ್ ಮಾಡುವಾಗ ಬುಧವಾರ ಈ ಘಟನೆ ನಡೆದಿದೆ.
ಭಾರೀ ಸದ್ದಿನಿಂದಾಗಿ ಸ್ಥಳೀಯರು ಭಯ ಭೀತರಾಗಿದ್ದು, ಪರಿಸ್ಥಿತಿಯ ಭೀಕರತೆಯನ್ನ ಕಂಡು ಜನರ ಹೃದಯ ಕಂಪಿಸಿದೆ. ಘಟನೆಯಲ್ಲಿ ಸಾವಿ ಗೀಡಾದವರಲ್ಲಿ ವೆಲ್ಡಿಂಗ್ ಅಂಗಡಿಯವ ವಕೀಲ್ ಸಾಹ್ನಿ ಸೇರಿದಂತೆ ಟ್ಯಾಂಕರ್ ಚಾಲಕ ಮತ್ತು ಸಹಾಯಕರ ದೇಹಗಳು ತುಂಡಾಗಿವೆ.