Thursday, 12th December 2024

ತೈಲ ದರ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ರೂ. 97.92, ಡೀಸೆಲ್ 90.81 ರೂ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 95 ರೂ. ಡೀಸೆಲ್ ಬೆಲೆ 86 ರೂ. ದಾಟಿದೆ.

ಪ್ರತಿ ಲೀಟರ್ ಗೆ 21 ಪೈಸೆಯಷ್ಟು ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರೆ, ಪ್ರತಿ ಲೀಟರ್ ಗೆ 20 ಪೈಸೆಯಷ್ಟು ಡೀಸೆಲ್ ಬೆಲೆ ಏರಿಕೆಯಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಲಡಾಖ್ ನಲ್ಲಿ ಪೆಟ್ರೋಲ್ ಬೆಲೆ 100 ರೂ. ಗಿಂತ ಹೆಚ್ಚಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಎಂಬಂತೆ 95.09 ರೂ.ಗೆ ಏರಿಕೆಯಾದರೆ, ಡೀಸೆಲ್ ಬೆಲೆ 86.01 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದ ನಂತರ ರಿಟೈಲ್ ದರಗಳು ಕೂಡಾ ಹೆಚ್ಚಾಗಿವೆ.

ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ನಂತರದ ಸ್ಥಾನದಲ್ಲಿವೆ.

ಮುಂಬೈನಲ್ಲಿ ಈಗ ಲೀಟರ್ ಪೆಟ್ರೋಲ್ ಬೆಲೆ 101.3 ರೂ ಇದ್ದರೆ ಡೀಸೆಲ್ ಬೆಲೆ 93.35 ರೂ. ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ರೂ. 97.92 ಪೈಸೆ ಇದ್ದರೆ ಡೀಸೆಲ್ 90.81 ಪೈಸೆಯಿದೆ.