ಢಾಕಾ: ದುರ್ಗಾ ಪೂಜಾ ಪೆಂಡಾಲ್ ಅನ್ನು ಗುರಿಯಾಗಿಸಿ ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್(Petrol bomb) ದಾಳಿ ನಡೆಸಿದ್ದು, ಭಯಭೀತರಾದ ನೂರಾರು ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಥಳದಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Bomb Blast in Tatibazara Puja Mandap, Dhaka.#DurgaPujaAttack2024 pic.twitter.com/BQqHj5SURo
— Voice of Bangladeshi Hindus 🇧🇩 (@VHindus71) October 11, 2024
ತಾಟಿ ಬಜಾರ್ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು,ದುರ್ಗಾಪೂಜಾ ಪೆಂಡಾಲ್ ಮೇಲೆ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪೆಟ್ರೋಲ್ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಭಕ್ತರು ಗಾಬರಿಗೊಂಡು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಒಂದು ವಿಡಿಯೋದಲ್ಲಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದನ್ನು ಕಾಣಬಹುದಾಗಿದೆ.
ಬಾಂಬ್ ಎಸೆಯುತ್ತಿರುವ ವಿಡಿಯೋ ವೈರಲ್
ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಭಾಂಗಣದಲ್ಲಿ ಇರಿಸಲಾಗಿದ್ದ ದುರ್ಗಾಪೂಜೆ ಮೂರ್ತಿಯತ್ತ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದ ದೃಶ್ಯವನ್ನು ಸೆರೆಹಿಡಿದಿದೆ. ಆರೋಪಿಯು ಸರತಿ ಸಾಲಿನಲ್ಲಿ ನಿಂತು ಹಿಂದೂ ದೇವತೆಯ ವಿಗ್ರಹದ ಕಡೆಗೆ ಸ್ಫೋಟಕವನ್ನು ಎಸೆಯುತ್ತಿದ್ದನು.
#Bangladesh
— Shan (@shanrockzy) October 11, 2024
Islamic militants of Bangladesh attacked the puja hall of Dhaka's Tanti Bazar Puja Committee with a petrol bomb, and several Hindus were injured in this attack.#SaveBangladeshiHindus #AllEyesOnBangladeshiHindus
Another #Pakistan in making? pic.twitter.com/D2Gtmkhuqv
ವರದಿಗಳ ಪ್ರಕಾರ, ಪಂಡಲ್‌ನಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಹಿಂದೂ ಭಕ್ತರು ದಾಳಿಕೋರನನ್ನು ತಡೆಯಲು ಯತ್ನಿಸಿದರಾದರೂ ಆತ ಚಾಕುವಿನಿಂದ ಇರಿದಿದ್ದಾನೆ. ಚಾಕು ದಾಳಿಯಲ್ಲಿ ಒಟ್ಟು 5 ಮಂದಿ ಗಾಯಗೊಂಡಿದ್ದಾರೆ.
ಉದ್ದೇಶಿತ ದಾಳಿಗೆ ಬಳಸಲಾಗಿದ್ದ ಸ್ಫೋಟಕವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ಇಬ್ಬರು ಆರೋಪಿಗಳನ್ನು ಪೊಲೀಸರು ಗುರುತಿಸಿ ಬಂಧಿಸಿದ್ದಾರೆ. ಅವರಲ್ಲಿ ಮೊಹಮ್ಮದ್ ಹೃದಯೊಯ್ ಮತ್ತು ಮೊಹಮ್ಮದ್ ಜಿಬೊನ್ ಎಂದು ಗುರುತಿಸಲಾಗಿದೆ.
ದುರ್ಗಾ ಪೂಜೆ ವೇಳೆ ಇಸ್ಲಾಂ ಗೀತೆ ಪ್ರಸಾರ
ಮತ್ತೊಂದೆಡೆ ಚಿತ್ತಗಾಂಗ್‌ನಲ್ಲಿ ದುರ್ಗಾಪೂಜೆ ಸಂದರ್ಭದಲ್ಲಿ ಮುಸ್ಲಿಮರ ತಂಡವೊಂದು ಇಸ್ಲಾಮಿಕ್ ಹಾಡನ್ನು ಹಾಡಲು ಮುಂದಾಗಿರುವ ಘಟನೆ ವರದಿಯಾಗಿದೆ. ಸಾಂಸ್ಕೃತಿಕ ಮೇಳ ಎಂದು ಹೇಳಿಕೊಳ್ಳುವ ಗುಂಪು ಗುರುವಾರ ಸಂಜೆ ಜೆಎಂ ಸೇನ್ ಹಾಲ್ ವೇದಿಕೆಯನ್ನು ಸಮೀಪಿಸಿತು ಎಂದು ಪ್ರತ್ಯಕ್ಷದರ್ಶಿಗಳು ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ಜಾತ್ಯತೀತ ಹಾಡನ್ನು ಪ್ರದರ್ಶಿಸಿದ ನಂತರ, ಗುಂಪು ಇಸ್ಲಾಮಿಕ್ ಹಾಡಲು ಮುಂದಾಯಿತು. ಇದಕ್ಕೆ ಅಲ್ಲಿ ನೆರೆದಿದ್ದ ಜನರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kolkata Row: ದುರ್ಗಾ ಪೂಜಾ ಪೆಂಡಾಲ್‌ಗೆ ನುಗ್ಗಿ ಅನ್ಯಕೋಮಿನ ದುಷ್ಕರ್ಮಿಗಳಿಂದ ದಾಂಧಲೆ; ದುರ್ಗಾ ಮೂರ್ತಿ ಧ್ವಂಸಗೊಳಿಸುವುದಾಗಿ ಬೆದರಿಕೆ