Sunday, 15th December 2024

ಡೀಸೆಲ್ ಬೆಲೆ ಇಳಿಕೆ, ಪೆಟ್ರೋಲ್‌ ದರದದಲ್ಲಿ 30 ಪೈಸೆ ಏರಿಕೆ

ನವದೆಹಲಿ: ತೈಲ ಮಾರಾಟ ಕಂಪನಿಗಳು ಸೋಮವಾರ ಇಂಧನ ದರವನ್ನು ಹೆಚ್ಚಿಸಿವೆ. ಇದೇ ಮೊದಲ ಬಾರಿಗೆ ಡೀಸೆಲ್ ಬೆಲೆ ಇಳಿಕೆಯಾಗಿದ್ದು, ಲೀಟರ್‌ಗೆ 14-16 ಪೈಸೆ ಕಡಿಮೆಯಾಗಿದೆ. ಪೆಟ್ರೋಲ್‌ ದರದದಲ್ಲಿ 28-30 ಪೈಸೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 106.59 ಮತ್ತು ಡೀಸೆಲ್‌ ದರ ₹ 97.18ಕ್ಕೆ ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 107.20 ಮತ್ತು ಡೀಸೆಲ್‌ ₹ 97.29ಕ್ಕೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರಿಗೆ ₹ 104.58 ಮತ್ತು ಡೀಸೆಲ್‌ ದರ ಲೀಟರಿಗೆ ₹ 95.09ನಷ್ಟಿದೆ.