Friday, 20th September 2024

ನಕಲಿ ಔಷಧಗಳ ತಯಾರಿ: 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

ವದೆಹಲಿ: 20 ರಾಜ್ಯಗಳ 76 ಕಂಪನಿಗಳ ಮೇಲೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತಪಾಸಣೆ ನಡೆಸಿದ ನಂತರ ನಕಲಿ ಔಷಧಗಳನ್ನು ತಯಾರಿಸಿದ್ದಕ್ಕಾಗಿ 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದುಗೊಳಿಸ ಲಾಗಿದೆ.

ಹಿಮಾಚಲ ಪ್ರದೇಶದಲ್ಲಿ 70 ಮತ್ತು ಉತ್ತರಾಖಂಡ್‌ನಲ್ಲಿ 45 ಮತ್ತು ಮಧ್ಯಪ್ರದೇಶದಲ್ಲಿ 23 ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ  ಮೂಲಗಳು ತಿಳಿಸಿವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಕ್ರಮ ಕೈಗೊಂಡಿರುವ ಹೆಚ್ಚಿನ ಕಂಪನಿಗಳು ನೋಂದಣಿಯಾಗಿವೆ.

ಡೆಹ್ರಾಡೂನ್‌ನಲ್ಲಿ ನೋಂದಾಯಿಸಲಾದ ಹಿಮಾಲಯ ಮೆಡಿಟೆಕ್ ಪ್ರೈವೇಟ್ ಲಿಮಿಟೆಡ್‌ನ ಪರವಾನಗಿಯನ್ನು ಡಿಸೆಂಬರ್ 30, 2022 ರಿಂದ ತಕ್ಷಣವೇ ಜಾರಿಗೆ ಬರುವಂತೆ ಉತ್ಪಾದನೆಗಾಗಿ ಅಮಾನತುಗೊಳಿಸಲಾಗಿದೆ ಮತ್ತು 12 ಉತ್ಪನ್ನಗಳನ್ನು ತಯಾರಿಸಲು ಅನುಮತಿಯನ್ನು ಈ ವರ್ಷ ಫೆಬ್ರವರಿ 7 ರಂದು ರದ್ದುಗೊಳಿಸಲಾಗಿದೆ.

ನಕಲಿ ಔಷಧಗಳ ತಯಾರಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಫಾರ್ಮಾ ಕಂಪನಿಗಳ ಮೇಲೆ ಭಾರಿ ಶಿಸ್ತುಕ್ರಮ ಇನ್ನೂ ನಡೆಯುತ್ತಿದೆ.