Monday, 18th November 2024

Physical Abuse: ಬಾಲಕಿಯ ಕುತ್ತಿಗೆಗೆ ದುಪ್ಪಟ್ಟಾ ಬಿಗಿದು ಬಾಲಕರಿಂದ ಅತ್ಯಾಚಾರ; ರಕ್ಷಿಸುವ ವಿಡಿಯೊ ಇದೆ

Physical Abuse

ಲಖನೌ: ಉತ್ತರ ಪ್ರದೇಶದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದೀಗ ಮತ್ತೊಂದು ಅತ್ಯಾಚಾರ ಪ್ರಕರಣ ಉತ್ತರ ಪ್ರದೇಶದ ಲಖನೌದ ಚಿನ್ಹಾಟ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶೌಚಕ್ಕೆಂದು ಹೊಲಕ್ಕೆ ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ ಮೂವರು ಬಾಲಕರು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ (Physical Abuse) ಎಸಗಿದ್ದಾರೆ.

ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ. ಶೌಚಕ್ಕಾಗಿ ಹೊಲಕ್ಕೆ ಬಂದ ಬಾಲಕಿಯನ್ನು ಮೂವರು ಬಾಲಕರು ಹಿಡಿದುಕೊಂಡು ಅವಳ ಕೈ ಮತ್ತು ಕಾಲುಗಳು ಮತ್ತು ಕುತ್ತಿಗೆಗೆ ದುಪ್ಪಟ್ಟನ್ನು ಕಟ್ಟಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಬಹಳ ಸಮಯದವರೆಗೆ ಮನೆಗೆ ಮರಳದಿದ್ದಾಗ, ಮನೆಯವರು ಹಾಗೂ ಸ್ಥಳೀಯರು ಅವಳನ್ನು ಹುಡುಕಾಡಲು ಶುರುಮಾಡಿದ್ದಾರೆ. ಆದರೆ ಬಾಲಕಿ ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಂಡು ಬಂತು. ಆಕೆಯ ಕುತ್ತಿಗೆಗೆ ದುಪ್ಪಟ್ಟವನ್ನು ಬಿಗಿಯಲಾಗಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಆಕೆಯ ಕುತ್ತಿಗೆಗೆ ಬಿಗಿದಿದ್ದ ದುಪ್ಪಟ್ಟವನ್ನು ತೆಗೆದು ಇನ್ನೂ ಉಸಿರಾಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64 (1) (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಸೆಕ್ಷನ್ 5/6 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಪ್ರಾಥಮಿಕ ತನಿಖೆಯಲ್ಲಿ ಸುತ್ತಮುತ್ತ ಊರಿನ ಮೂವರು ಬಾಲಕರು ಈ ಕೃತ್ಯ ಎಸಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ಮೂವರು ಸದಸ್ಯರ ತಂಡವನ್ನು ರಚಿಸಿದ್ದಾರೆ. ಬಾಲಕಿ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಮತ್ತು ಆಕೆಯ ಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಹಿಂದಿನಿಂದ ಬಂದು ಮುತ್ತು ಕೊಟ್ಟು ಬಂಗಾರ ಕಳಚುವ ತನಕ… ಫಸ್ಟ್ ನೈಟ್ ವಿಡಿಯೊ ಮಾಡಿ ಹಂಚಿಕೊಂಡ ನವ ಜೋಡಿ

ಇದೇರೀತಿ ಅಕ್ಟೋಬರ್ 12 ರಂದು ಗೊಡ್ಡಾ ಜಿಲ್ಲೆಯಲ್ಲಿ ದುರ್ಗಾ ಪೂಜಾ ಜಾತ್ರೆಯಿಂದ ಹಿಂದಿರುಗುತ್ತಿದ್ದ 14 ವರ್ಷದ ಬುಡಕಟ್ಟು ಜನಾಂಗದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ಮನೆಗೆ ಮರಳಿದ ನಂತರ ನಡೆದ ಘಟನೆಯನ್ನು ತನ್ನ ಹೆತ್ತವರಿಗೆ ತಿಳಿಸಿದ್ದಾಳೆ.  ಆಕೆಯ ತಾಯಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ನೀಡಿದ 24 ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಫ್ಐಆರ್ ನಂತರ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.