Friday, 22nd November 2024

Physical Abuse: ಬಾಲಕಿಯರ ಹಾಸ್ಟೆಲ್‍ಗೆ ನುಗ್ಗಿ ಒಳ ಉಡುಪು ಕದ್ದ ಕಾಮುಕ; ಮುಂದೇನಾಯ್ತು ನೋಡಿ!

Physical Abuse

ಛತ್ತೀಸ್‍ಗಢದ ಕೊಂಡಗಾಂವ್‍ನಲ್ಲಿರುವ ಸರ್ಕಾರಿ ಜಿಎನ್ಎಂ ನರ್ಸಿಂಗ್ ಇನ್ಸ್ಟಿಟ್ಯೂಟ್‍ನ ಹಾಸ್ಟೆಲ್‍ನಲ್ಲಿ ಇತ್ತೀಚೆಗೆ ಮಧ್ಯರಾತ್ರಿಯಲ್ಲಿ, ಯುವಕನೊಬ್ಬ ಬಾಲಕಿಯರ ಹಾಸ್ಟೆಲ್‍ಗೆ ಪ್ರವೇಶಿಸಿ ಅಲ್ಲಿದ್ದ ವಿದ್ಯಾರ್ಥಿನಿಗಳೊಂದಿಗೆ ಕೆಟ್ಟದಾಗಿ (Physical Abuse)ವರ್ತಿಸಿದ್ದಲ್ಲದೆ, ಅವರ ಒಳಉಡುಪುಗಳನ್ನು ಕದಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯರೆಲ್ಲ ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿದ್ಯಾರ್ಥಿನಿಯರ ಪ್ರಕಾರ, ರಾತ್ರಿ ಯುವಕ ಹಾಸ್ಟೆಲ್ ಆವರಣಕ್ಕೆ ಬಂದು ಅವರ ಕೋಣೆಯ ಮುಂದೆ ಹೋಗಿ ಬಾಗಿಲು ಬಡಿಯಲು ಶುರುಮಾಡಿದ್ದನಂತೆ. ಆರಂಭದಲ್ಲಿ, ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ.  ಆದರೆ ಯುವಕ ನಿರಂತರವಾಗಿ ಬಾಗಿಲು ಬಡಿದಾಗ, ಅವರು ಧೈರ್ಯವನ್ನು ತೋರಿಸಿ ಹೊರಗೆ ಬಂದು ಆತನನ್ನು ಎದುರಿಸಿದ್ದಾರೆ. ಇದರ ನಂತರ, ಯುವಕ ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಶುರುಮಾಡಿದ್ದಾನೆ. ವಿದ್ಯಾರ್ಥಿನಿಯರು ತಕ್ಷಣ ಹಾಸ್ಟೆಲ್ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಯುವಕನನ್ನು ಹಿಡಿದು ಒಪ್ಪಿಸಿದ್ದಾರೆ. ನಂತರ ಹಾಸ್ಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು,  ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Physical Abuse

80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆ ಹಾಸ್ಟೆಲ್‍ನಲ್ಲಿ ವಾಸವಾಗಿದ್ದಾರೆ.  ಆದರೆ ಭದ್ರತೆಗಾಗಿ ಕೇವಲ ಒಬ್ಬ ಹಾಸ್ಟೆಲ್‍ವಾರ್ಡನ್ ಅನ್ನು  ನೇಮಿಸಲಾಗಿದೆ. ಆ ಹಾಸ್ಟೆಲ್‍ ವಾರ್ಡನ್ ರಜೆಯಲ್ಲಿದ್ದ. ಹಾಗಾಗಿ ಈ ಸಮಯದಲ್ಲಿ ಹಾಸ್ಟೆಲ್‍ನ ಜವಾಬ್ದಾರಿ ಸ್ಟಾಫ್ ನರ್ಸ್ ತೆಗೆದುಕೊಂಡಿದ್ದರು. ಇಂತಹ ಸಮಯದಲ್ಲಿ ಈ ಘಟನೆ ನಡೆದಿದೆ.ನ

ಆರೋಪಿ ಯುವಕನನ್ನು ರಾಹುಲ್ ನೇತಮ್ (19) ಎಂಬುದಾಗಿ ತಿಳಿದುಬಂದಿದೆ. ತಾನು ತಪ್ಪಾಗಿ ಹಾಸ್ಟೆಲ್ ಪ್ರವೇಶಿಸಿದ್ದಾನೆ ಎಂದು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾನೆ ಎಂದು ಕೊಂಡಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಸೌರಭ್ ಉಪಾಧ್ಯಾಯ ತಿಳಿಸಿದ್ದಾರೆ.

ಇದನ್ನೂ ಓದಿ:ರೀಲ್ಸ್‌ ಶೋಕಿಗೆ ಜಿಂಕೆಗಳ ಹಿಂಡನ್ನು ಹೆದರಿಸಿದ ಪುಂಡರು! ವಿಡಿಯೊ ವೈರಲಾಗ್ತಿದ್ದಂತೆ ಯುವಕರಿಗೆ ಕಾದಿತ್ತು ಬಿಗ್‌ ಶಾಕ್

ವಿಕೃತ ಕಾಮುಕರು ಬಾಲಕಿಯರ ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ತೊಂದರೆ ನೀಡಿದ ಘಟನೆ ದಾಖಲಾಗಿದ್ದು, ಇದೇ ಮೊದಲಲ್ಲ. ಈ ಹಿಂದೆ ರಾಯ್ಪುರದ  ಜಶ್ಪುರ್ ಜಿಲ್ಲೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್‍ನಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಯುವಕನೊಬ್ಬ ಕೋಣೆಯೊಂದಕ್ಕೆ ನುಗ್ಗಿ ಮಲಗಿದ್ದ ವಿದ್ಯಾರ್ಥಿನಿಯನ್ನು ಹಾಸಿಗೆಯ ಮೇಲೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ ಘಟನೆ ನಡೆದಿತ್ತು. ವಿದ್ಯಾರ್ಥಿನಿ ಕಿರುಚಿಕೊಂಡ ಕಾರಣ ಆತ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ.  ಇತರರು ಅವನನ್ನು ಬೆನ್ನಟ್ಟಿದ್ದರು.  ಸುಮಾರು 40 ಬಾಲಕಿಯರಿಗೆ ಸ್ಥಳಾವಕಾಶವಿರುವ ಈ ಹಾಸ್ಟೆಲ್ ಆವರಣದಲ್ಲಿ ಯಾವುದೇ ಸೆಕ್ಯುರಿಟಿ ಇರಲಿಲ್ಲ.