Sunday, 24th November 2024

Physical Abuse: ಫಸ್ಟ್ ನೈಟ್ ವೇಳೆ ವಧುವಿನ ಮೇಲೆ ನೆರೆಮನೆಯವನಿಂದ ಅತ್ಯಾಚಾರ; ಕರೆಂಟ್‌ ಹೋದಾಗ ನಡೆದ ಕೃತ್ಯ

Physical Abuse

ಲಕ್ನೋ: ಫಸ್ಟ್ ನೈಟ್ ಎನ್ನುವುದು ವಧು ವರರ ಜೀವನದಲ್ಲಿ ಅತಿ ಮುಖ್ಯವಾದ ದಿನ. ಈ ದಿನದಿಂದ ದಂಪತಿ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸುತ್ತಾರೆ. ಹಾಗಾಗಿ ಫಸ್ಟ್ ನೈಟ್ ಎನ್ನುವುದು ವಧುವರರ ಜೀವನದಲ್ಲಿ ಮರೆಯಲಾಗದ ದಿನವಾಗಿರುತ್ತದೆ. ಆದರೆ ಉತ್ತರ ಪ್ರದೇಶದ ಭದೋಹಿಯಲ್ಲಿ ನವವಿವಾಹಿತ ಮಹಿಳೆಯೊಬ್ಬಳಿಗೆ ಫಸ್ಟ್ ನೈಟ್ ಎನ್ನುವುದು ಒಂದು ಆಘಾತಕಾರಿ  ದಿನವಾಗಿ ಪರಿಣಮಿಸಿದೆ. ಆಕೆ ಎಂದೂ ಊಹಿಸಲಾಗದ ಕಹಿ ಘಟನೆ ಅಂದು ನಡೆದುಬಿಟ್ಟಿದೆ. ಅದೇನೆಂದರೆ ಫಸ್ಟ್ ನೈಟ್ ರಾತ್ರಿಯ ಕತ್ತಲೆಯ ಲಾಭವನ್ನು ಪಡೆದುಕೊಂಡ ನೆರೆಮನೆಯ ವ್ಯಕ್ತಿ ನವವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ (Physical Abuse)ಎಸಗಿದ್ದಾನೆ.

ಫಸ್ಟ್ ನೈಟ್ ದಿನ ತನ್ನ ಪಕ್ಕ ಮಲಗಿದ್ದು ತನ್ನ ಪತಿ ಅಲ್ಲ ಬೇರೆಯವರು ಎಂದು ತಿಳಿದ ಬಳಿಕ ಸಂತ್ರಸ್ತೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಹಾಗಾಗಿ ಆಕೆ  ಅಸಹಾಯಕತೆಯಿಂದ ನ್ಯಾಯಾಲಯದ ಸಹಾಯವನ್ನು ಕೋರಿದ್ದಾಳೆ. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಸದ್ಯ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣವು ಗೋಪಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ ಪ್ರಕಾರ, ಜುಲೈ 17/18 ರ ರಾತ್ರಿ, ಮನೆಯಲ್ಲಿ ಕರೆಂಟ್ ಇಲ್ಲದಿದ್ದಾಗ , 32 ವರ್ಷದ ನೆರೆಮನೆಯ ವ್ಯಕ್ತಿ ಕಾಂಚು ಎಂಬಾತ ರಹಸ್ಯವಾಗಿ ವಧುವಿನ ಕೋಣೆಗೆ ಬಂದಿದ್ದಾನೆ.  ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅವನು ಬಂದು ವಧುವಿನ ಹಾಸಿಗೆಯ ಮೇಲೆ ಮಲಗಿದ್ದಾನೆ. ತನ್ನ ಪತಿ ಹಾಸಿಗೆಯ ಮೇಲೆ ಮಲಗಿದ್ದಾನೆ ಎಂದು ಭಾವಿಸಿ ವಧು ಆತನ ಪಕ್ಕ ಮಲಗಿದ್ದಾಳೆ. ಆದರೆ ಆತ ಆಕೆಯ ಜೊತೆ ಅಶ್ಲೀಲ ಕೃತ್ಯಗಳನ್ನು ಮಾಡಲು ಶುರು ಮಾಡಿದ್ದಾನೆ. ನಂತರ ಕರೆಂಟ್ ಬಂದಾಗ ಆಕೆಗೆ ಆಕೆ ತನ್ನ ಗಂಡನಲ್ಲ ಎಂದು ಗೊತ್ತಾಗಿದೆ. ತಕ್ಷಣ  ಅವಳು ಕಿರುಚಲು ಪ್ರಾರಂಭಿಸಿದ್ದಾಳೆ.  ಆದರೆ ಅಷ್ಟೊತ್ತಿಗಾಗಲೇ ಆಕೆಯ ಮೇಲೆ ಆತ ಅತ್ಯಾಚಾರ ಎಸಗಿ ಬಿಟ್ಟಿದ್ದ. ಸಂತ್ರಸ್ತೆಯ  ಕಿರುಚಾಟ ಕೇಳಿ, ಕುಟುಂಬ ಸದಸ್ಯರು ಮತ್ತು ನೆರೆಹೊರೆಯ ಜನರು ಸಹ ಅಲ್ಲಿಗೆ ಧಾವಿಸಿ ಬಂದರು.

ಮಹಿಳೆ ಆರೋಪಿಯನ್ನು ಹಿಡಿದು ಕುಟುಂಬದವರಿಗೆ ನೀಡಿದ್ದು, ಅವರು ಆತನನ್ನು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ  ಅಲ್ಲಿಗೆ ಬಂದ ಆರೋಪಿ ಕಾಂಚುವಿನ ಇಬ್ಬರು ಸಹೋದರರಾದ ಗಮೈ ಮತ್ತು ಬೋರಾ ವಧುವನ್ನು ನಿಂದಿಸಲು ಮತ್ತು ಕೆಟ್ಟ ಭಾಷೆಯಲ್ಲಿ ಬೈಯಲು ಶುರು ಮಾಡಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಮೂವರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ನಿಮ್ಮ ಸಂಗಾತಿಯ ಬಳಿ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ!

ಆದರೆ ವಧು ಪೊಲೀಸರಿಗೆ ಲಿಖಿತ ದೂರು ನೀಡಲು ಹೋದಾಗ ಆಕೆಯನ್ನು ಪೊಲೀಸ್ ಠಾಣೆಯಿಂದ ಹೊರಹಾಕಿದ್ದಾರೆ.  ಆಗ ವಧು  ಆಗಸ್ಟ್ 7ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ.  ಇದನ್ನು ಆಲಿಸಿದ ನ್ಯಾಯಾಲಯವು ಆರೋಪಿ ಕಾಂಚು ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತು. ಸದ್ಯ ಆರೋಪಿ ಹಾಗೂ ಆತನ ಇಬ್ಬರು ಸಹೋದರರು ಪರಾರಿಯಾಗಿದ್ದಾರೆ. ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.