Sunday, 15th December 2024

ಹಂದಿ ಉತ್ಪನ್ನಗಳ ಆಮದಿಗೆ ಮಿಜೋರಾಂ ನಿಷೇಧ

ಮಿಜೋರಾಂ: ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರದ ಪ್ರಕರಣಗಳು ಪತ್ತೆ ಯಾದ ನಂತರ ಮಿಜೋರಾಂ ಸರ್ಕಾರ ಹಂದಿಗಳು ಮತ್ತು ಹಂದಿ ಉತ್ಪನ್ನಗಳ ಆಮದು ನಿಷೇಧಿಸಿದೆ.

ಮುಂದಿನ ಆದೇಶದವರೆಗೆ ಇತರ ರಾಜ್ಯಗಳು ಮತ್ತು ಇತರ ದೇಶಗಳಿಂದ ಜೀವಂತ ಹಂದಿಗಳು, ತಾಜಾ ಹಂದಿಗಳು ಮತ್ತು ಹೆಪ್ಪು ಗಟ್ಟಿದ ಹಂದಿಮಾಂಸ ಸೇರಿದಂತೆ ಎಲ್ಲಾ ಇತರ ಹಂದಿಮಾಂಸ ಉತ್ಪನ್ನಗಳನ್ನು ಆಮದು ಮಾಡಿ ಕೊಳ್ಳುವುದನ್ನು ನಿಷೇಧಿಸ ಲಾಗುವುದು ಎಂದು ತಿಳಿಸಲಾಗಿದೆ.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯು ಹಂದಿ ಸಾಕಣೆ ಆವರಣದಲ್ಲಿ ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳ ಕೈಗೊಳ್ಳುವ ಜೊತೆಗೆ ಶಂಕಿತ ಹಂದಿಗಳ ಪ್ರತ್ಯೇಕತೆಯಲ್ಲಿಡಬೇಕೆಂದು ಹೇಳಲಾಗಿದೆ. ಹಂದಿ ಮೃತದೇಹವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡು ವಂತೆ ಸೂಚನೆ ನೀಡಲಾಗಿದೆ.

ಎಎಸ್‌ಎಫ್ ಕಳೆದ ವರ್ಷ ಮಾರ್ಚ್‌ನಿಂದ ನವೆಂಬರ್‌ವರೆಗೆ 33,417 ಹಂದಿಗಳನ್ನು ಬಲಿ ತೆಗೆದುಕೊಂಡಿದ್ದು, 60.82 ಕೋಟಿ ರೂಪಾಯಿ ನಷ್ಟವಾಗಿದೆ. ರೋಗ ಹರಡುವುದನ್ನು ತಡೆಯಲು ಕಳೆದ ವರ್ಷ ಒಟ್ಟು 10,910 ಹಂದಿಗಳನ್ನು ಕೊಲ್ಲಲಾಗಿದೆ.