Sunday, 15th December 2024

ಕೋಮುಗಲಭೆ ಘಟನೆ ಕುರಿತ ಪಿಐಎಲ್‌ ವಜಾ

ನವದೆಹಲಿ: ದೇಶದಲ್ಲಿ ರಾಮನವಮಿ ಮತ್ತು ಹನುಮ ಜಯಂತಿ ಆಚರಣೆ ವೇಳೆ ನಡೆದ ಕೋಮುಗಲಭೆಯ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿ ಸಿದೆ.

“ನ್ಯಾಯಾಲಯದಿಂದ ನೀಡಲಾಗದ ಪರಿಹಾರಗಳನ್ನು ಕೇಳಬೇಡಿ” ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಹೇಳಿದೆ.

ರಾಮನವಮಿ ಸಂದರ್ಭದಲ್ಲಿ ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್‌ ನಲ್ಲಿ ನಡೆದ ಘರ್ಷಣೆಗಳ ಬಗ್ಗೆ ತನಿಖೆ ನಡೆಸಲು ನಿರ್ದೇಶನಗಳನ್ನು ತಿವಾರಿ ಅವರು ಕೋರಿದ್ದರು.

‘ಬುಲ್ಡೋಜರ್ ಜಸ್ಟೀಸ್’ನ ಅನಿಯಂತ್ರಿತ ಕ್ರಮದ ಬಗ್ಗೆ ತನಿಖೆ ನಡೆಸಲು ಇದೇ ರೀತಿಯ ಸಮಿತಿಯನ್ನು ಸ್ಥಾಪಿಸಲು ನಿರ್ದೇಶನ ಗಳನ್ನು ಅರ್ಜಿಯು ಕೇಳಿದೆ. “ಇಂತಹ ಕ್ರಮಗಳು ಸಂಪೂರ್ಣವಾಗಿ ತಾರತಮ್ಯ ಮತ್ತು ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ” ಎಂದು ಮನವಿ ಸಲ್ಲಿಸಲಾಗಿದೆ.