Thursday, 12th December 2024

ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಮಾಣವಚನ ಸ್ವೀಕಾರ

ತಿರುವನಂತಪುರಂ : ಸಿಪಿಎಂ ಪಕ್ಷದಿಂದ ಭರ್ಜರಿ ಗೆಲುವು ಸಾಧಿಸಿ, ಕೇರಳದಲ್ಲಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಕೇರಳದ ಸಿಎಂ ಆಗಿ ಗುರುವಾರ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು.

ಕೇರಳದ ತಿರುವನಂತಪುರಂ ನಲ್ಲಿ ನಡೆದ ಸರಳ ಸಮಾರಂಭದಲ್ಲಿ, ಕೇರಳ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಅವರಿಂದ, ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಅಂದ ಹಾಗೇ, ಪಿಣರಾಯಿ ವಿಜಯನ್ ಅವರ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗವು ವಿಧಾನಸಭಾ ಚುನಾವಣೆ ಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ರಾಜ್ಯವು ಸಾಮಾನ್ಯವಾಗಿ ಎಡ ಮತ್ತು ಕಾಂಗ್ರೆಸ್ ಸರ್ಕಾರದ ನಡುವೆ ಪರ್ಯಾಯ ವಾಗಿರುತ್ತದೆ.

ಏಪ್ರಿಲ್-ಮೇ ಚುನಾವಣೆಯಲ್ಲಿ ಪ್ರಬಲ ಗೆಲುವು ದಾಖಲಿಸುವ ಮೂಲಕ ಎಲ್ ಡಿಎಫ್ 140 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದಿದೆ.