Friday, 18th October 2024

ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು: ನೊಟೀಸ್ ಜಾರಿ

ನವದೆಹಲಿ: ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ 70,000 ರೂಪಾಯಿ ನೀಡುವುದಕ್ಕೆ ಮುಖ್ಯೋಪಾಧ್ಯ ಯರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸಿತ್ತು.

ಆರ್ ಎಸ್ ಎಸ್ ನ ಟ್ರಸ್ಟ್ ಆಗಿರುವ ಸಮರ್ಥ ಶಿಕ್ಷಾ ಸಮಿತಿ ಹಾಗೂ ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದಿಂದ ಈ ಶಾಲೆ ಯನ್ನು ನಡೆಸಲಾಗುತ್ತಿತ್ತು. ಟ್ರಸ್ಟ್ ನಿಂದ ನಡೆಸಲಾಗುತ್ತಿರುವ ಶಾಲೆಗಳಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 70,000- 1,00,000 ರೂಪಾಯಿ ದೇಣಿಗೆ ಸಂಗ್ರಹಿಸುವುದಕ್ಕೆ ಟಾರ್ಗೆಟ್ ನೀಡಲಾಗಿತ್ತು.

ದೇಣಿಗೆ ಸಂಗ್ರಹಕ್ಕಾಗಿ ಸಿಬ್ಬಂದಿಗಳಿಗೂ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳು, ಪೋಷಕ ರಿಂದ ದೇಣಿಗೆ ಸಂಗ್ರಹ, ಮಾರ್ಕೆಟ್ ಗಳಿಗೆ ತೆರಳಿ ಅಥವಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುವಂತೆ ಶಾಲೆಯ ಆಡಳಿತ ಮಂಡಳಿ ಸೂಚನೆ ನೀಡಿತ್ತು. ಇದರ ಹೊರ ತಾಗಿ ಶಾಲೆಯ ಶಿಕ್ಷಕರಿಂದ ತಲಾ 15,000 ರೂಪಾಯಿ ದೇಣಿಗೆಯನ್ನು ಮಂದಿರ ನಿರ್ಮಾಣದ ಸಮರ್ಪಣ ನಿಧಿ ಫಂಡ್ ಗೆ ಸಂಗ್ರಹಿಸಲು ಶಾಲೆಯ ಆಡಳಿತ ಮಂಡಳಿ ಮುಂದಾಗಿತ್ತು.

ತಮ್ಮ ಪತಿ 2016 ರಲ್ಲಿ ಅಪಘಾತಕ್ಕೆ ಒಳಗಾದಾಗಿನಿಂದಲೂ ತಾವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು, ಆದರೂ ಮಂದಿರ ನಿರ್ಮಾಣಕ್ಕಾಗಿ 2,100 ರೂಪಾಯಿಗಳನ್ನು ನೀಡಿದ್ದರು, ಆದರೆ 15,000 ರೂಪಾಯಿ ನೀಡುವುದಕ್ಕೆ ಸಾಧ್ಯವಾಗಿಲ್ಲದ ಕಾರಣ ನಿರಾಕರಿಸಿದ್ದರು. ನಿಗದಿತ ಹಣವನ್ನು ನೀಡದೇ ಇದ್ದ ದಿನದಿಂದಲೂ ಮುಖ್ಯೋಪಾಧ್ಯಾಯರಿಗೆ ಕಿರುಕುಳ ನೀಡಲು ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿತ್ತು.

ಆರ್ಥಿಕ ಮುಗ್ಗಟ್ಟು, ಮಾನಸಿಕ ಕಿರಿಕಿರಿಯನ್ನು ತಾಳಲಾರದೇ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ಬೆಳವಣಿಗೆ ಗಳ ಬಳಿಕ ಶಾಲೆಯ ಆಡಳಿತ ಮಂಡಳಿ ಆಕೆಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿತ್ತು.