ನವದೆಹಲಿ: ಚಿಲ್ಲರೆ ಸಾಲ ಕ್ಷೇತ್ರದಲ್ಲಿ ಡಿಜಿಟಲ್-ಫಸ್ಟ್ ಧೋರಣೆ ಮುಂದುವರಿಸಿರುವ ಹೋಮ್ ಕ್ರೆಡಿಟ್ ಇಂಡಿಯಾ, ಅಂತಾ ರಾಷ್ಟ್ರೀಯ ಗ್ರಾಹಕ ಹಣಕಾಸು ಸಂಸ್ಥೆಯ ಸ್ಥಳೀಯ ವಿಭಾಗ, ಇಂದು ಮುಂಚೂಟಿ ಮರ್ಚೆಂಟ್ಸ್ ಪ್ಲ್ಯಾಟ್‍ಫಾರಂ ಆಗಿರುವ ಪೈನ್ ಲ್ಯಾಬ್ಸ್ ಜತೆಗಿನ ಸಹಭಾಗಿತ್ವವನ್ನು ಘೋಷಿಸಿದೆ. ಈ ಪಾಲುದಾರಿಕೆಯು ಹೋಮ್ ಕ್ರೆಡಿಟ್ ಇಂಡಿಯಾದ ಚಿಲ್ಲರೆ ಜಾಲವನ್ನು ಬಲಪಡಿಸುವುದರ ಜತೆಗೆ, ಇದರ ಉಜ್ವಲ್ ಕಾರ್ಡ್‍ನ ಡಿಜಿಟಲ್ ಇಎಂಐ ಹಣಕಾಸು ಸೌಲಭ್ಯವು ಭಾರತದಾದ್ಯಂತ ಪೈನ್ ಲ್ಯಾಬ್‍ನ ಪಿಒಎಸ್ ಹೊಂದಿರುವ ಮಳಿಗೆಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಿದೆ. ಹೋಮ್ ಕ್ರೆಡಿಟ್‍ಗೆ ಹೊಸಬ ರಾಗಿರುವ ಗ್ರಾಹಕರು ಕೂಡ, ಕೇವಲ 5 ನಿಮಿಷಗಳಲ್ಲಿ ಈ ಜಾಲಕ್ಕೆ ಸೇರ್ಪಡೆಯಾಗಲು ವರ್ತಕರು ನೆರವಾಗಲಿದ್ದಾರೆ.
ಪಾಲುದಾರಿಕೆ ಕುರಿತು ಮಾತನಾಡಿದ ಶ್ರೀ ಅಂಕುಶ್ ಖೋಸ್ಲಾ, ಮುಖ್ಯ ಮಾರಾಟ ಅಧಿಕಾರಿ, ಹೋಮ್ ಕ್ರೆಡಿಟ್ ಇಂಡಿಯಾ ಅವರು ಹೇಳಿದರು,.
ಪೈನ್ ಲ್ಯಾಬ್‍ನಂತಹ ಮುಂಚೂಣಿ ಸಂಸ್ಥೆಯನ್ನು ನಮ್ಮ ಪಾಲುದಾರರನ್ನಾಗಿ ಹೊಂದು ತ್ತಿರುವುದಕ್ಕೆ ಅತ್ಯಂತ ಸಂತೋಷ ವಾಗುತ್ತಿದೆ. ಇದು ಗ್ರಾಹಕ ಸಾಲವನ್ನು ಜನರಿಗೆ ಕೈಗೆಟುಕುವಂತೆ ಮಾಡುವ ಹೋಮ್ ಕ್ರೆಡಿಟ್ ಇಂಡಿಯಾದ ಅಭಿಯಾನವನ್ನು ಬಲಪಡಿಸಲಿದೆ ಮತ್ತು ಬೆಂಬಲ ನೀಡಲಿದೆ. ನಾವು ಯಾವಾಗಲೂ ವಿಶ್ವಾಸಾರ್ಹ ಹಣಕಾಸು ಉತ್ಪನ್ನ ಮತ್ತು ಸೇವೆಗಳನ್ನು ಹೊಣೆಗಾರಿಕೆಯಿಂದ ನೀಡುವುದ ರಲ್ಲಿ ನಂಬಿಕೆ ಇರಿಸಿದ್ದೇವೆ. ಇಂದಿನ ಕೋವಿಡ್ ನಂತರದ ಡಿಜಿಟಲ್ ಯುಗದಲ್ಲಿ ಈ ಸಹಭಾ ಗಿತ್ವವು ನಮ್ಮ ಪಾಲುದಾರ ಪಾಲುದಾರ ಜಾಲದೊಂದಿಗೆ ಬೆಳೆಯುತ್ತ, ನಮ್ಮ ಉತ್ಪನ್ನ ಮತ್ತು ಸೇವೆಗಳ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ’.
ಕಾಗದರಹಿತ, ವೆಚ್ಚ-ಹಿತ ಇಎಂಐ ಆಯ್ಕೆಯು ಪೈನ್ ಲ್ಯಾಬ್‍ನ ಆ್ಯಂಡ್ರಾಯ್ಡ್ ಪಿಒಎಸ್ ಟರ್ಮಿನಲ್‍ಗಳ ಮೂಲಕ ಲಭ್ಯವಿದ್ದು, 3, 6, 9, 12 ತಿಂಗಳ ಇಎಂಐ ಆಯ್ಕೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಗ್ರಾಹಕರಿಗೆ ಯಾವುದೇ ವೆಚ್ಚ ಹಾಕುವುದಿಲ್ಲ.