Thursday, 12th December 2024

ಪಿಥೋರ್​ಗಢ್​ನಲ್ಲಿ 2.02 ತೀವ್ರತೆಯ ಭೂಕಂಪ

ಪಿಥೋರ್​ಗಢ್: ಭಾರತ ನೇಪಾಳ ಗಡಿ ಪ್ರದೇಶ ಪಿಥೋರಗಢದಲ್ಲಿ ಭೂಕಂಪನದ ಅನುಭವವಾಗಿದೆ. ಗುರುವಾರ 2.2 ತೀವ್ರತೆಯ ಭೂಮಿ ಕಂಪಿಸಿದೆ ಎಂದು ಹೇಳಿದೆ.

ಭೂಕಂಪದ ಕೇಂದ್ರಬಿಂದುವು ಭೂಮಿಯ ಸುಮಾರು 20 ಕಿ.ಮೀ ಆಳದಲ್ಲಿ ಪತ್ತೆ ಯಾಗಿದೆ. ಮಂಗಳವಾರ ಪಿಥೋರಗಢದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕಳೆದ 38 ದಿನಗಳಲ್ಲಿ 9ನೇ ಬಾರಿಗೆ ಭೂ ಕಂಪನದ ಅನುಭವವಾಗಿದೆ. ಇಂದು 4.17 ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕ ದಲ್ಲಿ 4.3 ತೀವ್ರತೆ ದಾಖಲಾಗಿದೆ. ಅಂಡಮಾನ್ ದ್ವೀಪದಲ್ಲಿ ಭೂಕಂಪದ ಕೇಂದ್ರ ಬಿಂದು ಮೇಲ್ಮೈಯಿಂದ 61 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ನಿಕೋಬಾರ್ ದ್ವೀಪದಲ್ಲಿ ಇಂದು ಬೆಳಗ್ಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ.

ಕಳೆದ 38 ದಿನಗಳಲ್ಲಿ ಈ ಪ್ರದೇಶದಲ್ಲಿ ನಿರಂತರ ಭೂಕಂಪಗಳು ದಾಖಲಾಗಿವೆ. ಜು.29 ರಂದು 5.8 ಪ್ರಮಾಣ, ಜು.13 ರಂದು 4.3 ಪ್ರಮಾಣ, ಜು.9 ರಂದು ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ 5.3 ಪ್ರಮಾಣ, ಜು.ರಂದು ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ 5.8 ತೀವ್ರತೆ, ಜೂನ್ 26, ರಂದು ಮೂರು ಬಾರಿ ಭೂಮಿ ಕಂಪಿಸಿದೆ. ಅಂಡಮಾನ್ ದ್ವೀಪದಲ್ಲಿ 4.4 ತೀವ್ರತೆಯ, ಅರ್ಧ ಘಂಟೆಯ ಬಳಿಕ, ನಿಕೋಬಾರ್ ದ್ವೀಪದಲ್ಲಿ 4.4 ಮತ್ತು ಮತ್ತೆ ಅಂಡಮಾನ್ ದ್ವೀಪದಲ್ಲಿ 4.1 ರ ತೀವ್ರತೆಯ ಭೂಕಂಪನ ಸಂಭವಿಸಿತ್ತು.