Tuesday, 10th December 2024

Plastic Waste: ವಿಶ್ವದಲ್ಲೇ ಅತ್ಯಧಿಕ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುವ ದೇಶ ಭಾರತ

Plastic Waste

ವಾರ್ಷಿಕವಾಗಿ 57 ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ (Plastic Waste) ಉತ್ಪತ್ತಿಯಾಗುತ್ತಿದ್ದು, ಪ್ಲಾಸ್ಟಿಕ್ ಮಾಲಿನ್ಯಕ್ಕೆ ವಿಶ್ವದಲ್ಲೇ (world) ಭಾರತ (india) ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ನೇಚರ್ ಜರ್ನಲ್ ನಲ್ಲಿ ಪ್ರಕಟವಾದ ಲೀಡ್ಸ್ ವಿಶ್ವವಿದ್ಯಾಲಯದ ಹೊಸ ಅಧ್ಯಯನ ಇದನ್ನು ಬಹಿರಂಗ ಪಡಿಸಿದೆ.

ಜಾಗತಿಕವಾಗಿ ವರ್ಷದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ನ್ಯೂಯಾರ್ಕ್ ನಗರದ ಸೆಂಟ್ರಲ್ ಪಾರ್ಕ್ ಅನ್ನು ತುಂಬಬಹುದು. ಇದು 157 ಎಂಪೈರ್ ಸ್ಟೇಟ್ ಕಟ್ಟಡದಷ್ಟು ಎತ್ತರವಾಗುತ್ತದೆ. ಈ ಮಾಲಿನ್ಯದ ಸುಮಾರು ಮೂರನೇ ಎರಡರಷ್ಟು ಭಾಗವು ಸಂಗ್ರಹಿಸದ ಮತ್ತು ವಿಲೇವಾರಿ ಮಾಡದ ತ್ಯಾಜ್ಯದಿಂದ ಹುಟ್ಟಿಕೊಂಡಿದೆ. ಯಾಕೆಂದರೆ ಪ್ರಪಂಚದ ಸುಮಾರು ಶೇ. 15ರಷ್ಟು ಜನರು ಸರಿಯಾದ ತ್ಯಾಜ್ಯ ಸಂಗ್ರಹ ಸೇವೆಗಳನ್ನು ಹೊಂದಿಲ್ಲ. ಇದು ನಿರ್ಮಾಣವಾಗುತ್ತಲೇ ಇರುವ ತ್ಯಾಜ್ಯವನ್ನು ಅವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಪ್ರೇರೇಪಿಸುತ್ತದೆ.

ಅಗ್ರಸ್ಥಾನದಲ್ಲಿದೆ ಭಾರತ

ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ 9.3 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದು ಚೀನಾ, ನೈಜೀರಿಯಾ ಮತ್ತು ಇಂಡೋನೇಷ್ಯಾದಂತಹ ಹೆಚ್ಚು ಜನ ಸಂಖ್ಯೆ ಇರುವ ದೇಶಗಳಿಗಿಂತ ದ್ವಿಗುಣವಾಗಿದೆ.

Plastic Waste

ಹಿಂದೆ ಚೀನಾವು ಹೆಚ್ಚಿನ ಮಟ್ಟದ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸಿತು. ಆದರೆ ಈಗ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಚೀನಾದಲ್ಲಿ 2.8 ಮಿಲಿಯನ್ ಟನ್ ತ್ಯಾಜ್ಯವನ್ನು ಉತ್ಪಾದನೆಯಾಗುತ್ತಿದ್ದು, ಅದರ ಹಿಂದಿನ ದಾಖಲೆಗಳಿಂದ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಿದೆ. ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವಲ್ಲಿ ಪಟ್ಟುಬಿಡದ ಸುಧಾರಣೆಗಳಿಂದಾಗಿ ಈಗ ಅದು 4 ನೇ ಸ್ಥಾನದಲ್ಲಿದೆ.

ಹೆಚ್ಚಿನ ಜನಸಂಖ್ಯೆಯ ತ್ಯಾಜ್ಯ ಮತ್ತು ಸರಿಯಾದ ತ್ಯಾಜ್ಯ ನಿರ್ವಹಣೆ ಕೊರತೆಯಿಂದಾಗಿ ಭಾರತವು ಈಗ ವಿಶ್ವದಲ್ಲೇ ಪ್ರಮುಖ ತ್ಯಾಜ್ಯ ಕೊಡುಗೆದಾರನಾಗಿ ಮಾರ್ಪಟ್ಟಿದೆ. ತ್ಯಾಜ್ಯದ ಗಮನಾರ್ಹ ಭಾಗವು ಇನ್ನೂ ಸಂಗ್ರಹವಾಗದೆ ಉಳಿದಿದೆ. ಭಾರತವು ಬಲವಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಕೊರತೆಯನ್ನು ಎದುರಿಸುತ್ತಿದೆ.

Yettinahole Project: ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶ ಈಡೇರಲಿ: ವಿಜಯೇಂದ್ರ

ಆರೋಗ್ಯದ ಮೇಲೆ ಪರಿಣಾಮ

ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಟ್ಟು ಹಾಕುವುದು ಎಲ್ಲರಿಗೂ ಅನುಕೂಲಕರ ದಾರಿಯೆಂದು ತೋರುತ್ತಿದೆ. ಆದರೆ ಸುಮಾರು ಶೇ. 57ರಷ್ಟು ಮಾಲಿನ್ಯವು ಪ್ಲಾಸ್ಟಿಕ್ ತ್ಯಾಜ್ಯ ಸುಡುವುದರಿಂದ ಆಗುತ್ತಿದೆ. ಪರಿಸರ ಮತ್ತು ಆರೋಗ್ಯದ ಪರಿಣಾಮಗಳನ್ನು ಪರಿಗಣಿಸದೆ ಬೀದಿ, ತ್ಯಾಜ್ಯ ವಿಲೇವಾರಿ ಘಟಕ ಮತ್ತು ಮನೆಗಳಲ್ಲಿ ಅವುಗಳನ್ನು ಸುಡಲಾಗುತ್ತದೆ. ಪ್ಲಾಸ್ಟಿಕ್ ಅನ್ನು ಅನಿಯಂತ್ರಿತವಾಗಿ ಸುಡುವುದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿದ್ದು, ನರಗಳ ಅಭಿವೃದ್ಧಿ, ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.