Sunday, 15th December 2024

ಆಫ್‌ಲೈನ್ ಪರೀಕ್ಷೆ ರದ್ದು ಕೋರಿ ಸಲ್ಲಿಸಲಾದ ಮನವಿ ವಜಾ

ನವದೆಹಲಿ: ಎಲ್ಲಾ ರಾಜ್ಯ ಮಂಡಳಿಗಳು, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ನಡೆಸ ಲಾಗುವ ಹತ್ತು ಮತ್ತು ೧೨ ತರಗತಿಗಳ ಆಫ್‌ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಗೊಳಿಸಿದೆ .

ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠವು, ಅರ್ಜಿಯು ‘ಸುಳ್ಳು ಭರವಸೆ’ ಮತ್ತು ‘ಗೊಂದಲ’ವನ್ನು ಸೃಷ್ಟಿಸುತ್ತದೆ . ‘ಇದು ಸುಳ್ಳು ಭರವಸೆಗಳನ್ನು ಮಾತ್ರ ಸೃಷ್ಟಿಸುತ್ತದೆ, ಇದು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಗೊಂದಲವನ್ನು ಸೃಷ್ಟಿಸುತ್ತದೆ’ ಎಂದು ನ್ಯಾಯ ಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.

‘ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಮಾಡಲಿ ಮತ್ತು ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಲಿ’ ಎಂದು ಪೀಠವು ತಿಳಿಸಿತು. ಏಪ್ರಿಲ್ 26 ರಿಂದ 10 ನೇ ತರಗತಿ ಮತ್ತು 12 ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‌ಇ ನಿರ್ಧರಿಸಿದೆ.