Saturday, 5th October 2024

ನಾನು ಉತ್ತರಿಸಲು ಸಾಧ್ಯವಿಲ್ಲದ ಒಂದೇ ಒಂದು ಪ್ರಶ್ನೆ ಕೇಳಿ: ಸೀತಾರಾಮನ್ ಸವಾಲು

ನವದೆಹಲಿ : ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಯ್ದೆಯ ಯಾವ ಅಂಶವು ರೈತರಿಗೆ ಹಾನಿ ಮಾಡುತ್ತದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಪಕ್ಷಗಳು ಸೇರಿದಂತೆ ಎಲ್ಲರೊಂದಿಗೆ ಸುದೀರ್ಘ ಸಮಾಲೋಚನೆ ಬಳಿಕವಷ್ಟೇ ಮಸೂದೆ ಗಳನ್ನ ಮಂಡನೆ ಮಾಡಿದ್ದಾರೆ. ಆದರೆ ವಿಪಕ್ಷಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

‘ಪ್ರತಿಭಟನೆಗಳು ಯಾವ ಕಾರಣಕ್ಕೆ ನಡೆಯುತ್ತಿದೆ. ಕಾಯ್ದೆಯ ಯಾವ ಅಂಶ ನಿಮಗೆ ಸರಿ ಕಾಣುತ್ತಿಲ್ಲ? ರೈತರಿಗೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂದು ದಯವಿಟ್ಟು ಹೇಳಿ. ನಾನು ನಿಮಗೆ ಉತ್ತರಿಸಲು ಸಾಧ್ಯವಿಲ್ಲದ ಒಂದೇ ಒಂದು ಪ್ರಶ್ನೆ ಕೇಳಿ’ ಎಂದು ಸಚಿವೆ ಹೇಳಿದ್ದಾರೆ.