Sunday, 15th December 2024

ಟಾಯ್‌ಕಥಾನ್‌ ಸ್ಪರ್ಧಾಳುಗಳೊಂದಿಗೆ ಜೂ.24ರಂದು ಪ್ರಧಾನಿ ಸಂವಾದ

ನವದೆಹಲಿ: ‘ಟಾಯ್‌ಕಥಾನ್‌-2021’ರ ಸ್ಪರ್ಧಾಳುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೊ ಕಾನ್ಪರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ.

ನವೀನ ಆಟಿಕೆಗಳು ಮತ್ತು ಹೊಸ ಆಟಗಳ ಉಪಾಯಗಳಿಗಾಗಿ ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವಾಲಯ, ಜವಳಿ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಡಿ‍ಪಿಐಐಟಿ, ಎಐಸಿಟಿಇಯು ಜಂಟಿಯಾಗಿ ‘ಟಾಯ್‌ಕಥಾನ್‌-2021’ ಅನ್ನು ಜನವರಿ 5 ರಂದು ಆಯೋಜಿಸಿತು.

ದೇಶದಾದ್ಯಂತ 1.2 ಲಕ್ಷ ಜನರು ಭಾಗವಹಿಸಿದ್ದು, 17,000ಕ್ಕೂ ಹೆಚ್ಚು ನವೀನ ಯೋಜನೆಗಳು ಸಲ್ಲಿಕೆಯಾಗಿದ್ದವು.

ಈ ಪೈಕಿ 1,567 ನವೀನ ಯೋಜನೆಗಳು ಮೂರು ದಿನಗಳ ‘ಟಾಯ್‌ಕಥಾನ್‌-2021’ರ ಅಂತಿಮ ಸುತ್ತಿಗೆ (ಗ್ರ್ಯಾಂಡ್‌ ಫಿನಾಲೆ) ಆರಿಸಲಾಗಿದೆ. ಇದೇ 22ರಿಂದ 24ರವರೆಗೆ ಆನ್‌ಲೈನ್‌ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ.