ದೇಶಾದ್ಯಂತ ರೈತರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆ (PM Kisan Yojana) ಎಂದೇ ಜನಪ್ರಿಯವಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Yojana) 18ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗಳಿಗೆ ಜಮೆಯಾಗಲಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಅರ್ಹ ರೈತರಿಗೆ ಅವರ ಕೃಷಿ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಆದಾಯವನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಹಣಕಾಸಿನ ನೆರವಾಗಿದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಅರ್ಹ ರೈತ ಕುಟುಂಬಗಳು ವರ್ಷಕ್ಕೆ 6,000 ರೂಪಾಯಿಗಳನ್ನು ಪಡೆಯುತ್ತಾರೆ. ತಲಾ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಇದನ್ನು ವಿತರಿಸಲಾಗುತ್ತದೆ. ಇಲ್ಲಿಯವರೆಗೆ 17 ಕಂತುಗಳ ಹಣವನ್ನು ಜಮಾ ಮಾಡಲಾಗಿದ್ದು ಮುಂಬರುವ 18ನೇ ಕಂತಿನಿಂದ ಸುಮಾರು 12 ಕೋಟಿ ರೈತರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಆದರೆ 18ನೇ ಕಂತಿನ 2,000 ರೂ. ಪಡೆಯಲು ರೈತರು ಈ ಕೆಳಗಿನ ಮೂರು ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಅದರಲ್ಲಿ ಇಕೆವೈಸಿ, ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಮತ್ತು ಭೂ ದಾಖಲೆಗಳನ್ನು ಪರಿಶೀಲಿಸುವುದು.
ಇಕೆವೈಸಿ ಪೂರ್ಣಗೊಳಿಸುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ರೈತರು ತಮ್ಮ ಇಕೆವೈಸಿ ಅನ್ನು ಮನೆಯಿಂದಲೇ ಸುಲಭವಾಗಿ ಪೂರ್ಣಗೊಳಿಸಬಹುದು ಅಥವಾ ಇದಕ್ಕಾಗಿ ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಒಂದು ವೇಳೆ ಇದು ತೊಂದರೆ ಎನಿಸಿದರೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇದನ್ನು ಮಾಡಬಹುದು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್
ಪಿಎಂ ಕಿಸಾನ್ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಅತ್ಯಗತ್ಯ. ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ಸಂಪರ್ಕ ಮಾಡದೇ ಇದ್ದರೆ 18ನೇ ಕಂತಿನ 2,000 ರೂ. ಹಣ ಜಮೆಯಾಗುವುದಿಲ್ಲ.
Money Tips: 2 ಪ್ಯಾನ್ ಕಾರ್ಡ್ ಹೊಂದಿದ್ದರೆ ಈಗಲೇ ಒಂದನ್ನು ಕ್ಯಾನ್ಸಲ್ ಮಾಡಿ; ಇಲ್ಲದಿದ್ದರೆ ಕಾದಿದೆ ಭಾರಿ ದಂಡ
ಭೂ ದಾಖಲೆಗಳನ್ನು ಪರಿಶೀಲಿಸಿ
ರೈತರು ತಮ್ಮ ಭೂ ದಾಖಲೆಗಳನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಗಾಗಿ ಪರಿಶೀಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಭೂ ದಾಖಲೆಗಳನ್ನು ಪರಿಶೀಲಿಸದಿದ್ದರೆ ಕಂತಿನ ಹಣ ಬರುವುದು ವಿಳಂಬವಾಗಬಹುದು.