Thursday, 12th December 2024

ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಸಂತಾಪ

ನವದೆಹಲಿ: ಒಲಿಂಪಿಯನ್ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಮಿಲ್ಖಾ ಸಿಂಗ್‌ ನಿಧನವು ನನ್ನನ್ನು ದುಃಖತಪ್ತನನ್ನಾಗಿ ಮಾಡಿದೆ. ಅವರ ಹೋರಾಟಗಳ ಕಥೆ ಮತ್ತು ವ್ಯಕ್ತಿತ್ವದ ಶಕ್ತಿಯು ತಲೆಮಾರುಗಳ ಕಾಲ ಭಾರತೀ ಯರಿಗೆ ಸ್ಫೂರ್ತಿ ನೀಡಲಿದೆ. ಸಂತಾಪಗಳು’ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

‘ಕೆಲವು ದಿನಗಳ ಹಿಂದಷ್ಟೇ ಮಿಲ್ಖಾ ಸಿಂಗ್‌ ಜೀ ಅವರ ಬಳಿ ಮಾತನಾಡಿದ್ದೆ. ಅದು ನಮ್ಮ ಕೊನೆಯ ಸಂಭಾಷಣೆಯಾಗಿರ ಬಹುದು ಎಂದು ಭಾವಿಸಿರಲಿಲ್ಲ. ಹಲವಾರು ಕ್ರೀಡಾಪಟುಗಳು ಅವರ ಜೀವನ ಯಾನದಿಂದ ಸ್ಫೂರ್ತಿ ಪಡೆಯ ಲಿದ್ದಾರೆ. ಅವರ ಅಗಲುವಿಕೆಯ ಸಂತಾಪಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಮಿಲ್ಖಾ ಸಿಂಗ್ ಭಾರತದ ಹೆಮ್ಮೆ. ಅವರ ಸಾವಿನಿಂದ ತೀವ್ರ ದುಃಖವಾಗಿದೆ. ಕೆಲವು ದಿನಗಳ ಹಿಂದೆ ಅವರ ಪತ್ನಿ ಸಹ ನಿಧನ ರಾಗಿದ್ದರು. ಕಳೆದ ವರ್ಷ ನಾನು ಅವರ ಮನೆಯಲ್ಲಿ 2 ಗಂಟೆಗಳ ಕಾಲ ಇದ್ದು ಅವರ ಜತೆ ಮಾತನಾಡಿದ್ದೆ. ಇಬ್ಬರೂ ತುಂಬಾ ದಯಾಮಯಿಗಳಾಗಿದ್ದರು, ಓಂ ಶಾಂತಿ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.