Friday, 22nd November 2024

ದಿವ್ಯಾಂಗ ವಯೋವೃದ್ದರ ಕುರಿತು ಪ್ರಧಾನಿ ಮೆಚ್ಚುಗೆ

ಕೊಟ್ಟಯಂ/ನವದೆಹಲಿ: ವರ್ಷದ ಮೊದಲ ಮನ್‌ ಕೀ ಬಾತ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಯ ಕುರಿತ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕುರಿತಂತೆ ಕೇರಳ ರಾಜ್ಯದ ಕೊಟ್ಟಯಂನ ದಿವ್ಯಾಂಗ ವಯೋವೃದ್ದರನ್ನು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಭಾರತದ ಕೇರಳ ರಾಜ್ಯದ ಕೊಟ್ಟಯಂ ಎಂಬಲ್ಲಿ ವಯೋವೃದ್ದ ಎನ್‌.ಎಸ್‌.ರಾಜಪ್ಪ ಸಾಹೇಬ್‌ ಅವರು ದಿವ್ಯಾಂಗರಾಗಿ ದ್ದರೂ, ಸ್ವಚ್ಛತೆ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿಂಜರಿದಿಲ್ಲ ಎಂದರು. ಕಳೆದ ಹಲವು ವರ್ಷಗಳಿಂದ ದೋಣಿಯಲ್ಲಿ ವೆಂಬನಾಡ ಜಲಪಾತದತ್ತ ತೆರಳಿ ಅಲ್ಲಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್‌ ಬಾಟಲಿಗಳನ್ನು ಹೆಕ್ಕಿ, ಸಂಗ್ರಹಿಸಿ, ಜಲಪಾತ ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ.

ಯಾವುದೇ ಅಂಗವೈಕಲ್ಯವಿಲ್ಲದಿರುವವರ ನಮ್ಮಂಥವರ ನಡುವೆ, ರಾಜಪ್ಪನ್‌ ಅವರ ಸಾಮಾಜಿಕ ಹಾಗೂ ಪರಿಸರ ಸ್ವಚ್ಛತೆಯತ್ತ ಅವರ ಹೊಣೆಗಾರಿಕೆ ಹಾಗೂ ಆಲೋಚನೆ ಬಹು ಎತ್ತರದ್ದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮೆಲ್ಲರಿಗೂ, ಸ್ವಚ್ಛತೆ ವಿಚಾರದಲ್ಲಿ ರಾಜಪ್ಪನ್‌ ಅವರ ಸಮಾಜಮುಖಿ ಕೆಲಸ ಪ್ರೇರಣೆಯಾಗಲಿ ಎಂದು ಆಗಲಿ, ಎಲ್ಲೆಲ್ಲಿ ಸಾಧ್ಯವಿದೆಯೋ, ಅಲ್ಲಿ ನಮ್ಮ ಶ್ರಮ ಪ್ರಯೋಜನಕ್ಕೆ ಬರಲಿ ಎಂದು ಕರೆ ನೀಡಿದರು.